ನವದೆಹಲಿ: ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ (Smart phones) ಸಂಚಾರ ಸಾಥಿ (sanchar saathi) ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವ ಆದೇಶವನ್ನು ಇಂದು (ಡಿ.03) ಹಿಂಪಡೆದುಕೊಂಡಿದೆ.
ದಾವಣಗೆರೆ | ಕುಸಿತ ಹಾದಿ ಹಿಡಿದ ಅಡಿಕೆ ದರ- ಡಿ.3ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಮೊಬೈಲ್ ಕಳ್ಳತನ ಪತ್ತೆ ಮಾಡಲು ಸಹಕಾರಿ ಆಗುವ ಸಂಚಾರ ಸಾಥಿ ಆ್ಯಪ್ ಪ್ರಿ-ಇನ್‌ಸ್ಟಾಲ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಕಂದಾಯ ಇಲಾಖೆ ಮಹತ್ವ ನಿರ್ಧಾರ; ಇನ್ಮುಂದೆ ಒಂದೇ ಹಾಳೆಯಲ್ಲಿ ಪಹಣಿ, ಆಕಾರ ಬಂದ್, ಪೋಡಿ ನಕ್ಷೆ, ಮ್ಯುಟೇಶನ್ ಲಭ್ಯ
ಈ ಬಗ್ಗೆ ಹೊಸ ಆದೇಶ ಹೊರಡಿಸಲಾಗಿದ್ದು, ಸಂಚಾರ್ ಸಾಥಿ ಅಪ್ಲಿಕೇಷನ್ ಕಡ್ಡಾಯವಲ್ಲ. ನಿಮಗೆ ಬೇಡವಾದಲ್ಲಿ ಮೊಬೈಲ್‌ನಿಂದ ಡಿಲೀಟ್ ಮಾಡಬಹುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ವಂಚನೆಯಿಂದ ನಾಗರಿಕರನ್ನು ರಕ್ಷಿಸಲು, ಸೈಬರ್ ಕ್ರೈಂ ಚಟುವಟಿಕೆಗಳನ್ನು ತಡೆಯಲು ಸಹಾಯ ಮಾಡಲು ಮತ್ತು ಸೈಬರ್ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿತ್ತು.
ಒಂದೇ ದಿನದಲ್ಲಿ ಸ್ವಯಂ ಪ್ರೇರಿತವಾಗಿ ಸಂಚಾರ ಸಾಥಿ ಆಯಪ್ ಡೌನ್‌ಲೋಡ್ ಮಾಡಿಕೊಂಡವರ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಬಳಕೆದಾರರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಉದ್ದೇಶವಾಗಿತ್ತು. ಕಳೆದೊಂದು ದಿನದಲ್ಲಿ 6 ಲಕ್ಷ ಮಂದಿ ಆಯಪ್ ಡೌನ್‌ಲೋಡ್ ಮಾಡಿದ್ದು, 10 ಪಟ್ಟು ಹೆಚ್ಚಳ ಕಂಡುಬಂದಿದೆ. ಆಯಪ್‌ಗೆ ಹೆಚ್ಚುತ್ತಿರುವ ಬೆಂಬಲದ ಹಿನ್ನೆಲೆಯಲ್ಲಿ ಪ್ರಿ-ಇನ್‌ಸ್ಟಾಲ್ ಕಡ್ಡಾಯಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



