ಬೆಂಗಳೂರು: ಕಂದಾಯ ಇಲಾಖೆ (revenue department) ಜಮೀನು ಹೊಂದಿದ ರೈತರಿಗೆ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಪಹಣಿ, ಆಕಾರಬಂದ್, ಪೋಡಿ ನಕ್ಷೆ, ಮ್ಯುಟೇಶನ್ ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಈ ನಾಲ್ಕು ದಾಖಲೆಯನ್ನೂ ಒಂದೇ ಹಾಳೆಯಲ್ಲಿ ಮುದ್ರಿಸಿ ಒದಗಿಸಲು ಕಂದಾಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ದಾವಣಗೆರೆ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಟ್ರೈಲರ್ ಕಳಚಿ ಬಿದ್ದು ಇಬ್ಬರು ಸಾವು; ಎಂಟು ಜನರಿಗೆ ಗಾಯ
ಪಹಣಿಗೆ ತೆಗೆಸಿದ್ರೆ ಎಲ್ಲಾ ದಾಖಲೆ ಲಭ್ಯ
ಈಗ ಪಹಣಿಗೆ ಶುಲ್ಕ ಪಾವತಿ ಮಾಡಿದರೆ, ಪಹಣಿಯಷ್ಟೇ ಸಿಗುತ್ತಿದೆ. ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಲು ಮತ್ತು ಭೂ ವ್ಯವಹಾರಗಳಿಗೆ ಪೋಡಿ ನಕ್ಷೆ, ಆಕಾರಬಂದ್, ಮ್ಯುಟೇಶನ್ ದಾಖಲೆ ಅಗತ್ಯ.
ಇವೆಲ್ಲವನ್ನೂ ಪ್ರತ್ಯೇಕವಾಗಿ ಪಡೆದುಕೊಳ್ಳಲು ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಅಲೆಯಬೇಕಿದೆ. ಆದರೆ, ಪಹಣಿ ಪುಟದ ಹಿಂಬದಿಯಲ್ಲಿಯೇ ಆಕಾರಬಂದ್, ಪೋಡಿ ನಕ್ಷೆ, ಮ್ಯುಟೇಶನ್ ದಾಖಲೆಯನ್ನು ಮುದ್ರಿಸಿಕೊಡುವ ವ್ಯವಸ್ಥೆ ರೂಪಿಸಲಾಗಿದೆ.
ದಾವಣಗೆರೆ: ಹಿಂಗಾರು ಹಂಗಾಮಿನ ಬೆಳೆಗಳಿಗೆ ಫಸಲ್ ಬಿಮಾ ಯೋಜನೆ ಜಾರಿ; ಯಾವ ಬೆಳೆಗೆ ವಿಮೆ ಸೌಲಭ್ಯ..?
25 ರೂ.ಗೆ ಎಲ್ಲಾ ದಾಖಲೆ ರೈತರ ಕೈಗೆ
ಒಂದು ಪಹಣಿಗೆ ಈಗ ₹25 ಶುಲ್ಕ ವಿಧಿಸಲಾಗುತ್ತಿದೆ. ಯಾವುದೇ ಹೆಚ್ಚಿನ ಶುಲ್ಕವಿಲ್ಲದೆ ನಾಲ್ಕೂ ದಾಖಲೆಪತ್ರಗಳನ್ನು ನೀಡಲಾಗುತ್ತದೆ. ಇದರಿಂದ ರೈತರು ಮಧ್ಯವರ್ತಿಗಳ ಹಾವಳಿಯಿಂದ, ದಾಖಲೆ ಪತ್ರಗಳನ್ನು ಪಡೆದುಕೊಳ್ಳುವಲ್ಲಿ ಆಗುತ್ತಿರುವ ವಿಳಂಬದಿಂದ ಪಾರಾಗಲಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಭೂಮಿ-2 ತಂತ್ರಾಂಶ ಅಭಿವೃದ್ಧಿ
ಈ ನಾಲ್ಕೂ ದಾಖಲೆ ಪತ್ರಗಳು ಕಂದಾಯ ಇಲಾಖೆಯ ವಿವಿಧ ವಿಭಾಗಗಳ ಅಡಿಯಲ್ಲಿ ಬರುತ್ತವೆ. ಅವುಗಳನ್ನು ಬೇರೆ-ಬೇರೆ ತಂತ್ರಾಂಶಗಳು ನಿರ್ವಹಣೆ ಮಾಡುತ್ತವೆ. ಈ ಎಲ್ಲ ವಿವರಗಳನ್ನು ಸಂಯೋಜಿಸುವ ಮತ್ತು ಒಂದೇ ಪುಟದಲ್ಲಿ ಮುದ್ರಣವಾಗುವಂತೆ ಭೂಮಿ-2 ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್‌ನಿಂದಲೇ ಈ ವ್ಯವಸ್ಥೆಯನ್ನು ಜಾರಿಗೆ ತರಲು ಗಡುವು ಹಾಕಿಕೊಳ್ಳಲಾಗಿದೆ.



