ದಾವಣಗೆರೆ: ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಮಾರಾಟ ವಿಭಾಗದ ಸಹಾಯಕ ನಿರ್ದೇಶಕ ಜೆ. ಪ್ರಭು ಮನೆ, ಕಚೇರಿ ಮೇಲೆ ಇಂದು (ನ.25) ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಲೋಕಾಯುಕ್ತರು ಪೊಲೀಸರು ಬರೋಬ್ಬರಿ 1 ಕೆ.ಜಿ. 700 ಗ್ರಾಂ ಚಿನ್ನಾಭರಣ ಹಾಗೂ 10 ಕೆ.ಜಿ ಬೆಳ್ಳಿ ಸಾಮಗ್ರಿ, 7.5 ಲಕ್ಷ ನಗದು ಹಾಗೂ 6 ನಿವೇಶ ಪತ್ರಗಳು ಪತ್ತೆಯಾಗಿದ್ದು, ಎಲ್ಲ ಅಕ್ರಮ ಸಂಪತ್ತು ವಶಕ್ಕೆ ಪಡೆದಿದ್ದಾರೆ.
ಭೀಕರ ಅಪಘಾತ | ಬೆಸ್ಕಾಂ ಎಂಡಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾ*ವು
ದಾವಣಗೆರೆ ನಗರದ ಆಂಜನೇಯ ಬಡಾವಣೆಯ ಮನೆ, ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದ ತೋಟದ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೊರೆ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು.
ಏನೆಲ್ಲಾ ವಶಕ್ಕೆ ಪಡೆಯಲಾಯಿತು..?
- 1 ಕೆ.ಜಿ. 700 ಗ್ರಾಂ ಚಿನ್ನಾಭರಣ
- 10 ಕೆ.ಜಿ ಬೆಳ್ಳಿ ಸಾಮಗ್ರಿ
- 7.5 ಲಕ್ಷ ನಗದು
- 6 ನಿವೇಶ ಪತ್ರಗಳು
ದಾವಣಗೆರೆ: ಪೊಲೀಸರೇ ಚಿನ್ನದ ದರೋಡೆಗೆ ಸಾಥ್; ಇಬ್ಬರು ಪಿಎಸ್‌ಐ ಸೇರಿದಂತೆ 7 ಆರೋಪಿಗಳ ಬಂಧನ 8 ಲಕ್ಷ ಮೌಲ್ಯದ ಚಿನ್ನ ವಶ
ಮನೆಯಲ್ಲಿ 7.5 ಲಕ್ಷ ನಗದು ಪತ್ತೆಯಾಗಿದೆ. ಎರಡು ಮನೆ, 6 ನಿವೇಶನಗಳ ದಾಖಲೆಗಳು ಪತ್ತೆಯಾಗಿವೆ. ಡಿವೈಎಸ್‌ಪಿ ಕಲಾವತಿ, ಇನ್‌ಸ್ಪೆಕ್ಟರ್ ಗುರುಬಸವರಾಜ್ ತಂಡ ದಾಳಿಯಲ್ಲಿ ಭಾಗಿಯಾಗಿದ್ದರು.



