ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣದ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಾಕಿ ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿ (Traffic Fine Discount) ನೀಡಿ ಸರ್ಕಾರ ಆದೇಶಿಸಿದೆ.
ದಾವಣಗೆರೆ; ಅಡಿಕೆ ದರ ಸ್ಥಿರ; ನ.21ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸಲು ಶೇ 50% ರಷ್ಟು ರಿಯಾಯಿತಿ ಆದೇಶವು ದಿನಾಂಕ: 21.11.2025 ರಿಂದ 12.12.2025 ರವರೆಗೆ ಜಾರಿಯಲ್ಲಿಸದೆ. ಶೇ.50 ರಷ್ಟು ದಂಡವನ್ನು ಪಾವತಿಸಲು ಇನ್ನೂ ಕೆಲವೇ ದಿನಗಳು ಬಾಕಿ ಇದ್ದು , ಕೂಡಲೇ ಈ ಕೆಳಕಂಡ ಸ್ಥಳಗಳಲ್ಲಿ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿರುತ್ತದೆ.
ದಾವಣಗೆರೆ: ವಸತಿ ಯೋಜನೆಗಳಿಗೆ ಅರ್ಜಿ ಆಹ್ವಾನ
ಇ-ಚಲನ್ ದಂಡ ಪಾವತಿಸುವ ಸ್ಥಳಗಳು:
1. ಸಾರ್ವಜನಿಕರು ತಮ್ಮ ಸಮೀಪದ ಪೋಸ್ಟ್ ಆಫೀಸ್ ಗಳಿಗೆ ಬೇಟಿ ನೀಡಿ ಇ-ಚಲನ್ ದಂಡವನ್ನು ಪಾವತಿಸಬಹುದಾಗಿದೆ.
2. ಜಿಲ್ಲೆಯಲ್ಲಿ ಸಾರ್ವಜನಿಕರು ತಮ್ಮ ಸಮೀಪದ ಯಾವುದೇ ಪೊಲೀಸ್ ಠಾಣೆಗಳಿಗೆ ಬೇಟಿ ನೀಡಿ ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ ಬಾಕಿ ಇರುವ ದಂಡವನ್ನು ಪರಿಶೀಲಿಸಿ ಪಾವತಿಸಬಹುದಾಗಿದೆ.
3. ದಾವಣಗೆರೆ ನಗರದ ಉತ್ತರ ಸಂಚಾರಿ ಪೊಲೀಸ್ ಠಾಣೆ, ದಕ್ಷಿಣ ಸಂಚಾರ ಠಾಣೆ, ಆರ್.ಟಿ.ಓ ಕಛೇರಿ ವೃತ್ತ, ಎಸಿ ಕಛೇರಿ ವೃತ್ತ, ಅರುಣ ವೃತ್ತ & ಸಂಚಾರ ವೃತ್ತ ಕಛೇರಿ, ಸಂಗೊಳ್ಳಿ ರಾಯಣ್ಣ ವೃತ್ತ, ಜಯದೇವ ವೃತ್ತ, ಗುಂಡಿ ವೃತ್ತ, ನಿಜಲಿಂಗಪ್ಪ ಬಡಾವಣೆ ಬಳಿ ಕರ್ನಲ್ ರವೀಂದ್ರನಾಥ ವೃತ್ತ (ಟವರ್ ಕ್ಲಾಕ್ ವೃತ್ತ), ಹೊಂಡದ ವೃತ್ತ, ಲಕ್ಷ್ಮೀ ವೃತ್ತ, ಚಾಮರಾಜಪೇಟೆ ವೃತ್ತ, ಬಾಡಾ ಕ್ರಾಸ್, ರಾಮ & ಕೋ ವೃತ್ತ, ಹೈಸ್ಕೂಲ್ ಮೈದಾನ ಗಳಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳ ಬಳಿ ಬೇಟಿ ನೀಡಿ ಇ-ಚಲನ್ ದಂಡವನ್ನು ಪಾವತಿಸಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.



