ದಾವಣಗೆರೆ: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರದಿಂದ ಭಾರತೀಯ ಶಾಸ್ತ್ರೀಯ ಸಂಗೀತ, ಭಾರತೀಯ ಶಾಸ್ತ್ರೀಯ ನಾಟ್ಯ, ರಂಗಭೂಮಿ, ಹಾಸ್ಯನಾಟಕ, ದೃಶ್ಯ ಕಲೆ, ಜಾನಪದ, ಸಾಂಪ್ರದಾಯಿಕ ಮತ್ತು ದೇಸಿ ಕಲೆಗಳ ಹಾಗೂ ಲಘು ಶಾಸ್ತ್ರೀಯ ಸಂಗೀತ ಕ್ಷೇತ್ರಗಳಲ್ಲಿನ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ (ಎಸ್ ವೈಎ) ಯುವ ಕಲಾವಿದರಿಗೆ ಶಿಷ್ಯವೇತನ ಪ್ರದಾನ ಯೋಜನೆಗೆ ಆಫ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
10ನೇ ನವಂಬರ್, 2025 ರಿಂದ ಜಾರಿಗೊಂಡಂತೆ 2025-26ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಸಾಲಿನಲ್ಲಿ 400 ಶಿಷ್ಯವೇತನಗಳು ಲಭ್ಯವಿರುತ್ತವೆ. ಯೋಜನೆಯ ವಿವರ, ಅರ್ಜಿದಾರರಿಗೆ ಸೂಚನೆಗಳು, ಅರ್ಹತಾ ಷರತ್ತುಗಳು/ಮಾನದಂಡಗಳು ಮತ್ತು ಅರ್ಜಿ ನಮೂನೆಯು, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಹಾಗೂ
ಸಿಸಿಆರ್‌ಟಿರವರ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುತ್ತದೆ.
www.indiaculture.gov.in/ www.ccrtindia.gov.in ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 15ನೇ ಡಿಸೆಂಬರ್, 2025 ಕೇವಲ ಆಫ್‌ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.



