ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿಯಾಗಿ ಹಂದಿ ಬಿಡುವ ಮಾಲೀಕರ ವಿರುದ್ಧ ಕಾನೂನು ಕ್ರಮ ಎಚ್ಚರಿಕೆಯನ್ನು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ನಿಫಾ ವೈರಸ್, ಎಚ್.ಎನ್1 ಹಾಗೂ ಇನ್ನಿತರ ಸಾಂಕ್ರಮಿಕ ಖಾಯಿಲೆಗಳ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ, ನಗರದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಬಿಡಾಡಿ ಹಂದಿಗಳನ್ನು ನಿಯಂತ್ರಿಸುವುದು ಅವಶ್ಯವಿರುತ್ತದೆ.
ಮಹಾನಗರ ಪಾಲಿಕೆಯ ಅನುಮತಿಯಿಲ್ಲದೇ ಹಂದಿಗಳ ಸಾಕಣೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಉಪದ್ರವಕಾರಿಯಾಗುವಂತೆ ಬಿಡಾಡಿಯಾಗಿ ಅಲೆಯಲು ಬಿಡುವುದು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಉಲ್ಲಂಘನೆಯಾಗಿರುತ್ತದೆ.
ನಗರದಲ್ಲಿ ಸಾರ್ವಜನಿಕರಿಗೆ ಉಪದ್ರವಕಾರಿಯಾಗುವಂತೆ ಬಿಡಾಡಿಯಾಗಿ ಅಲೆಯುತ್ತಿರುವ ಹಂದಿಗಳನ್ನು ಹಿಡಿದು ಸೂಕ್ತ ಸೌಲಭ್ಯಗಳನ್ನು ಒದಗಿಸಿ ಪಾಲಿಕೆ ಅನುಮತಿಯೊಂದಿಗೆ ಸಾಕಣೆ ಮಡಬೇಕು. ತಪ್ಪಿದಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ಸಾರ್ವಜನಿಕರಿಗೆ ಉಪದ್ರವವಾಗುವಂತೆ ಅಲೆಯುತ್ತಿರುವ ಬಿಡಾಡಿ ಹಂದಿಗಳನ್ನು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಕ್ರಮವಹಿಸಲಾಗುವುದು. ಹಾಗೂ ಇದರಿಂದ ಉಂಟಾಗುವ ಯಾವುದೇ ನಷ್ಟಗಳಿಗೆ ಪಾಲಿಕೆ ಜವಾಬ್ದಾರಿಯಾಗುವುದಿಲ್ಲ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.



