ದಾವಣಗೆರೆ: ಜಿಲ್ಲೆಯ ಮುಖ್ಯ ಬೆಳೆಯಾದ ಮೆಕ್ಕೆಜೋಳ ದರ (maize rate) ಕುಸಿತದಿಂದ ರೈತರು ಸಂಕಷ್ಠದಲ್ಲಿದ್ದು, ಎಪಿಎಂಸಿ ಮಾರುಕಟ್ಟೆಯ ಇ-ಟೆಂಡರ್ ವಹಿವಾಟಿನಲ್ಲಿ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್ ಗೆ 2 ಸಾವಿರಕ್ಕಿಂತ ಕಡಿಮೆ ದರ ನಮೂದು ಮಾಡದಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ವರ್ತಕರಿಗೆ ಸೂಚನೆ ನೀಡಿದ್ದಾರೆ.
ದಿನಕ್ಕೆ ಎರಡು ಸಲ ಇ-ಟೆಂಡರ್ ಮಾಡಿ
ಎಪಿಎಂಸಿ ಅಧಿಕಾರಿಗಳು, ಮೆಕ್ಕೆಜೋಳ ವರ್ತಕರು ಮತ್ತು ರೈತ ಮುಖಂಡರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು. ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಒಣಗಿಸಲು ವ್ಯವಸ್ಥೆ ಮಾಡಬೇಕು. ದಿನಕ್ಕೆ ಎರಡು ಸಲ ಇ-ಟೆಂಡರ್ ವ್ಯವಸ್ಥೆ ಮಾಡಲಾಗುವುದು. ವರ್ತಕರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.
ಮೆಕ್ಕೆಜೋಳ ಬೆಳೆದ ರೈತ ದರ ಕುಸಿತದಿಂದ ಕಂಗಾಲಾಗಿದ್ದಾನೆ. ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು
-ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ.ಸತೀಶ್
ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ, ತೀವ್ರ ಮಳೆಯಿಂದ ತೇವಾಂಶ ಹೆಚ್ಚಿ ಇಳುವರಿ ಕಡಿಮೆಯಾಗಿದೆ. ದರ ಕುಸಿತದಿಂದ ಮೆಕ್ಕೆಜೋಳ ಬೆಳೆದ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. 2,400 ರಿಂದ 2,600 ರ ವರೆಗೆ ಇದ್ದ ದರ ಈಗ 1,500 ರಿಂದ 1,700ಕ್ಕೆ ಕುಸಿದಿದೆ. ಮೆಕ್ಕೆಜೋಳ ಬೆಳೆದ ರೈತ ದರ ಕುಸಿತದಿಂದ ಕಂಗಾಲಾಗಿದ್ದಾನೆ. ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ಆಗ್ರಹಿಸಿದರು.
ರೈತರು ಹಸಿ ಹಸಿ ಮೆಕ್ಕೆಜೋಳ ತಂದ್ರೆ ಹೆಚ್ವಿಸಲು ಆಗಲಲ್ಲ. ಒಣಗಿಸಿ ತಂದ್ರೆ ದರದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡಬಹುದು. ಆದರೆ, ರೈತರು ಹಸಿ ಮಾಲಿನಿಂದ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ
-ಮೆಕ್ಕೆಜೋಳ ವರ್ತಕ, ಕೆ.ಜಾವೀದ್ ಸಾಬ್
ಎಪಿಎಂಸಿ ಕಾರ್ಯದರ್ಶಿ ಎಚ್.ಸಿ.ಎಂ ರಾಣಿ, ಸಹಾಯಕ ನಿರ್ದೇಶಕ ಜೆ. ಪ್ರಭು, ದಲಾಲರ ಸಂಘದ ಅಧ್ಯಕ್ಷ ಬೂದಿಹಾಳ ಹಾಲೇಶಗೌಡ್ರು, ಒಬ್ಬನಳ್ಳಿ ಜಾವೀದ್, ಆರ್.ಜಿ.ರುದ್ರೇಶ್, ಬಾಳನಗೌಡ್ರು, ದೊಗ್ಗಳ್ಳಿ ಬಸವರಾಜು, ರೈತ ಮುಖಂಡರಾದ ಹೂವಿನಮಡು ನಾಗರಾಜ್, ಕೋಲ್ಕುಂಟೆ ಬಸಪ್ಪ, ಚಿನ್ನಸಮುದ್ರ ಭೀಮನಾಯ್ಕ, ಐಗೂರು ನಾಗರಾಜಪ್ಪ, ದೊಗ್ಗಳ್ಳಿ ಬಾಬುರಾಜೇಂದ್ರ, ಸಂಜಯ್, ದಶರಥರಾಜು ಮುಂತಾದವರು ಉಪಸ್ಥಿತರಿದ್ದರು.



