ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದಂತೆ ನನಗೆ ಹುಚ್ಚು ನಾಯಿ ಕಡಿದಿರೋದು ನಿಜ. ಆ ಹುಚ್ಚು ನಾಯಿ ಯಾವುದು ಅಂತ ಎಲ್ಲರಿಗೂ ಗೊತ್ತಾಗಬೇಕಾಲ್ಲವೇ. ಆ ಹುಚ್ಚು ನಾಯಿ ಬೇರೆ ಯಾವುದು ಅಲ್ಲ, ಜಿಲ್ಲಾ ಉಸ್ತುವಾರಿ ಎಸ್.ಎಸ್. ಮಲ್ಲಿಕಾರ್ಜುನ ಎಂಬ ಹುಚ್ಚುನಾಯಿ ಕಡಿದಿದೆ. ಮೊದಲು ಆ ಹುಚ್ಚುನಾಯಿಗೆ ಹುಚ್ಚು ಬಿಡುಸಬೇಕು ಎಂದು ಶಾಸಕ ಬಿ.ಪಿ. ಹರೀಶ್ ಕಿಡಿಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಡವರ ಆಸ್ತಿ ಕಬಳಿಸುವ ಹುಚ್ಚು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿನೇಶ್ ಶೆಟ್ಟಿ ಶಾಮನೂರು ಕುಟುಂಬದ ಸೇವೆ ಮಾಡಿ ಮಾಡಿ ಈಗ ಧೂಡಾ ಅಧ್ಯಕ್ಷ ಆಗಿದ್ದಾರೆ. ಅವರು ತಂದೆನೂ ಶಾಮನೂರು ಕುಟುಂಬ ಸೇವೆ ಮಾಡುತ್ತಿದ್ದರು. ಅದನ್ನ ದಿನೇಶ್ ಮುಂದುವರೆಸಿದ್ದಾರೆ. ಇದೇ ರೀತಿ ಶಾಮನೂರು ಕುಟುಂಬದ ಸೇವೆ ಮುಂದುವರೆಸಿದ್ರೆ ಮುಂದೆ MLAನೂ ಆಗಬಹುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಡವರ ಆಸ್ತಿ ಕಬಳಿಸುವ ಹುಚ್ಚು ಹಿಡಿದಿದೆ. ಆ ಹುಚ್ಚು ಬಿಡಿಸಬೇಕು. ಈಗಾಗಲೇ ಹುಚ್ಚು ಬಿಡಿಸುವ ಕೆಲಸ ಮುಂದುವರೆದಿದೆ. ಮುಂದೆಯೂ ಜಿಲ್ಲಾ ಉಸ್ತುವಾರಿ ಸಚಿವರ ಇನ್ನಷ್ಟು ಭ್ರಷ್ಟಾಚಾರ ಹೊರ ತಂದು ಹುಚ್ಚು ಬಿಡಿಸುತ್ತೇವೆ ಎಂದರು.
ಶಾಮನೂರು ಶುಗರ್ ಫ್ಯಾಕ್ಟರಿಗೆ ಭೂಮಿ ಕಬಳಿಕೆ ಆರೋಪ
ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಯ ಗಡಿಯಲ್ಲಿ ಇರುವ ಶಾಮನೂರು (Shamanuru) ಶುಗರ್ ಫ್ಯಾಕ್ಟರಿಯಿಂದ ಬಡ ರೈತರ ಎರಡು ಸಾವಿರ ಎಕರೆ ವಶಕ್ಕೆ ಪಡೆದಿದ್ದಾರೆ. ನೂರಾರು ಎಕರೆ ಭೂಮಿ ಸರ್ಕಾರದಿಂದ ಕಬಳಿಕೆ ಮಾಡಿದ್ದಾರೆ. ಆ ಪ್ರದೇಶದಲ್ಲಿನ ಹಳ್ಳವನ್ನು ಸಹ ಮುಚ್ಚಲಾಗಿದೆ ಎಂದು ಶಾಮನೂರು ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸದನದಲ್ಲೂ ಪ್ರಶ್ನೆ ಮಾಡಿದ್ದೇನೆ
ಭೂಮಿ ಕಬಳಿಕೆ ಬಗ್ಗೆ ನಾನು ಸದನದಲ್ಲೂ ಮಾತಾಡಿದ್ದೇನೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಅದೇ ದೂರಿನ ಅನ್ವಯ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ದೇಶದಲ್ಲಿ ಸರ್ವೆ ಮಾಡಲು ಆದೇಶವಾಗಿದೆ ಎಂದರು.
ಶಾಮನೂರು ಕುಟುಂಬಕ್ಕೆ ಹಳ್ಳ ಮುಚ್ಚುವ, ತೆಗೆಯುವ ಹುಚ್ಚು
ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಸಮೀಪ ರೈತನ್ನು ಓಡಿಸಲು ಹಳ್ಳ ಮುಚ್ವಿದ್ರು. ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುತ್ತಲೇ ಹಳ್ಳ ಓಪನ್ ಮಾಡಿದ್ರು. ಸದನ ಮುಗಿಯುತ್ತಲೇ ಮತ್ತೆ ಮುಚ್ವಿದ್ರು. ಅ. 27ಕ್ಕೆ ಸರ್ವೆ ಇಲಾಖೆ ಜಂಟಿ ನಿರ್ದೇಶಕರ ನೇತ್ರತ್ವದಲ್ಲಿ ಮರು ಸರ್ವೆ ನಡೆಯಲಿದೆ. ಹೀಗೆ ಸರ್ವೆ ಅಧಿಕಾರಿಗಳು ಬರುತ್ತಾರೆ ಎಂದು ಗೊತ್ತಾಗಿದ್ದೇ ತಡ ನಿನ್ನೆ ರಾತ್ರಿ ಹಳ್ಳ ಸರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ.. ಶಾಮನೂರು ಕುಟುಂಬಕ್ಕೆ ಹಳ್ಳ ಮುಚ್ಚುವ, ತೆಗೆಯುವ ಹುಚ್ಚು ಬಂದಿದೆ ಎಂದರು.
ಅ. 27ಕ್ಕೆ ಸರ್ವೆ ಇಲಾಖೆ ಜಂಟಿ ನಿರ್ದೇಶಕರ ನೇತ್ರತ್ವದಲ್ಲಿ ಮರು ಸರ್ವೆ ನಡೆಯಲಿದೆ. ಹೀಗೆ ಸರ್ವೆ ಅಧಿಕಾರಿಗಳು ಬರುತ್ತಾರೆ ಎಂದು ಗೊತ್ತಾಗಿದ್ದೇ ತಡ ನಿನ್ನೆ ರಾತ್ರಿ ಹಳ್ಳ ಸರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
-ಬಿ.ಪಿ.ಹರೀಶ್, ಶಾಸಕ
ಯಾವುದೇ ಕಾರಣಕ್ಕೆ ನಾನು ಇವರನ್ನ ಬಿಡಲ್ಲ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಕಂದಾಯ ಸಚಿವರಿದ್ದಾಗ ಶಾಮನೂರ ಗ್ರಾಮದ ಜಮೀನು ಕಬಳಿಸಲು ಇದೇ ಶಾಮನೂರು ಕುಟುಂಬ ಮುಂದಾಗಿತ್ತು. ಆಗಲು ಹೋರಾಟ ನಡೆಸಿ ರೈತರ ಭೂಮಿ ಉಳಿಸಿದ್ದೇ, ಈಗಲೂ ಹೋರಾಟ ಮಾಡಿ ರೈತರ ಭೂಮಿ ಉಳಿಸುವೆ ಎಂದು ತಿಳಿಸಿದರು.
ಆರ್ಎಸ್ಎಸ್ ನಿಷೇಧ ಸಾಧ್ಯವಿಲ್ಲ
ಸಚಿವ ಪ್ರಿಯಾಂಕ ಖರ್ಗೆಗೆ ಅಧಿಕಾರದ ದರ್ಪ ಹೆಚ್ಚಾಗಿದೆ ಇದೇ ಕಾರಣಕ್ಕೆ ಆರ್ಎಸ್ಎಸ್ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಹೇಳಿದರೆ ಡಿಸಿಎಂ ಅಥವಾ ಸಿಎಂ ಆಗಬಹುದು ಎಂಬುದು ಅವರ ಮನಸ್ಸಿನಲ್ಲಿ ಇರಬಹುದು. ಆರ್ಎಸ್ಎಸ್ ನಿಷೇಧ ಮಾಡುವುದು ಕಾಂಗ್ರೆಸ್ ನಾಯಕರಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದರು.



