ದಾವಣಗೆರೆ: ಭಾರತದ ವಿಶ್ವಾಸಾರ್ಹ ಸರ್ಕಾರಿ ಸ್ವಾಮ್ಯದ ಟೆಲಿಕಾಂ ದೈತ್ಯ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ದೀಪಾವಳಿಗೆ ಭರ್ಜರಿ ಆಫರ್ ಘೋಷಿಸಿದೆ.
1 ರೂ. ಆಫರ್
ದೀಪಾವಳಿ ಬೊನಾನ್ಜಾವನ್ನು ಪ್ರಾರಂಭಿಸಿದ್ದು, ಇದು ಸೀಮಿತ ಅವಧಿಯ ರೂ. 1 ಕೊಡುಗೆಯಾಗಿದೆ. ಈ ಬಳಕೆದಾರರಿಗೆ ಬಿಎಸ್ಎನ್ಎಲ್ನ 4ಜಿ ಮೊಬೈಲ್ ಸೇವೆಗಳನ್ನು ಒಂದು ಪೂರ್ಣ ತಿಂಗಳು ಪರೀಕ್ಷಿಸಲು ಮತ್ತು ಅನುಭವಿಸಲು ಅವಕಾಶ ಮಾಡಿಕೊಟ್ಟಿದೆ.
ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ, ಎಸ್ಟಿಡಿ), ದಿನಕ್ಕೆ 2 ಜಿಬಿ ಹೈ-ಸ್ಪೀಡ್ ಡೇಟಾ, ದಿನಕ್ಕೆ 100 ಎಸ್ಎಂಎಸ್, ಮತ್ತು ಬಿಎಸ್ಎನ್ಎಲ್ನ ಸಿಮ್ ಸಂಪೂರ್ಣವಾಗಿ ಉಚಿತ, ಮಾನ್ಯತೆ -30 ದಿನಗಳು. ನವಂಬರ್ 15 ರವರೆಗೆ ಜಾರಿಯಾರುತ್ತದೆ.
ಗ್ರಾಹಕರು ಹತ್ತಿರದ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಭೇಟಿ ನೀಡುವ ಮೂಲಕ ಬಿಎಸ್ಎನ್ಎಲ್ ದೀಪಾವಳಿ ಬೊನಾನ್ಹಾ ಯೋಜನೆಯನ್ನು ಪಡೆಯಬಹುದು ಎಂದು ಡಿಜಿಎಂ ತಿಳಿಸಿದ್ದಾರೆ.