ದಾವಣಗೆರೆ: ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 1,10,000/- ರೂ ಮೌಲ್ಯದ 1 ಕೆಜಿ 160 ಗ್ರಾಂ ತೂಕ ಇರುವ ಗಾಂಜಾ ಸೊಪ್ಪು, ಒಂದು ಬೈಕ್ , ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಸಂಜೆ ಸಮಯದಲ್ಲಿ ಶಿಕಾರಿಪುರ ಕಡೆಯಿಂದ ಸವಳಂಗ ಗ್ರಾಮದ ಮೂಲಕ ಗಾಂಜಾ ಸಾಗಾಣಿಕೆಯಾಗುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸ್ಪಿ ಉಮಾ ಪ್ರಶಾಂತ್ , ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪಿಎಸ್ಐ ಸಾಗರ್ ಅತ್ತಾರ್ ವಾಲಾ ಸಿಬ್ಬಂದಿಗಳು ಹಾಗೂ ನ್ಯಾಮತಿ ಪೊಲೀಸ್ ಠಾಣೆಗೆ ಪೊಲೀಸ್ ನಿರೀಕ್ಷಕ ಎನ್ ಎಸ್ ರವಿ ಮತ್ತು ಪಿಎಸ್ಐ ಹೊಳಬಸಪ್ಪ ಹೊಳಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಮಾಚಗೊಂಡನಹಳ್ಳಿ ಗ್ರಾಮದ ಬಳಿ ಬೈಕ್ ನಲ್ಲಿ ಇಬ್ಬರು ಆಸಾಮಿಗಳು ಅನುಮಾನಾಸ್ಪದವಾಗಿ ಬರುತ್ತಿದ್ದವರನ್ನು ತಡೆದು ವಿಚಾರಿಸಲಾಗಿ ಗಾಂಜಾ ಸಮೇತ ಸಿಕ್ಕಿ ಬಿದ್ದಿದ್ದಾರೆ.
ಬೈಕ್ ನ ಸೈಡ್ ಬ್ಯಾಗ್ ನಲ್ಲಿ ನೀಲಿ ಬಣ್ಣದ ಕವರ್ ಇದ್ದು ಅದರಿಂದ ಘಾಟು ವಾಸನೆ ಬರುತ್ತಿತ್ತು, ಬೈಕ್ ಚಾಲನೆ ಮಾಡುತ್ತಿದ್ದವನು 1]ಅಖಿಯಾಜ್ ಅಹಮ್ಮದ್ (54) ವಾಸ ಶಿಕಾರಿಪುರ ಟೌನ್, ಹಾಗೂ ಹಿಂಬದಿ ಸವಾರನ ಹೆಸರು 2]ಸೈಯ್ಯದ್ ಶಪೀವುಲ್ಲಾ (58) , ವಾಸ ಹಾರನಹಳ್ಳಿ ಗ್ರಾಮ ಇವರಬ್ನು ಬಂಧನಮಾಡಿ ಹೆಚ್ಚಿನ ವಿಚಾರಣೆ ಒಳಪಡಿಸಿದಾಗ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಅಂದಾಜು 1,10,000/- ರೂ ಮೌಲ್ಯದ 1 ಕೆಜಿ 160 ಗ್ರಾಂ ತೂಕ ಇರುವ ಗಾಂಜಾ ಸೊಪ್ಪನ್ನು, ಒಂದು ಹಿರೋ ಹೊಂಡ ಸೆಪ್ಲಂಡರ್ ಪ್ಲಸ್ ಬೈಕ್ , ಒಂದು ಮೊಬೈಲ್ ಪೋನ್ ಅನ್ನು ವಶಕ್ಕೆ ಪಡಿಸಿಕೊಂಡೆಯಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸದ್ದಾರೆ.