ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ (arecanut rate) ಚಿನ್ನದಂತ ಬೆಲೆ ಬಂದಿದೆ. ಪ್ರತಿ ದಿನ ಏರಿಕೆ ಕಾಣುತ್ತಿದ್ದು, ಅಕ್ಟೋಬರ್ ಆರಂಭದಿಂದಲೂ ಸತತ ಏರಿಕೆ ಕಾಣುತ್ತಿದೆ. ಈ ವರ್ಷದಲ್ಲಿಯೇ ಇಂದು (ಅ.13) ಗರಿಷ್ಠ ರೇಟ್ ದಾಖಲಾಗಿದ್ದು, ಜಿಲ್ಲೆಯಲ್ಲಿ ರಾಶಿ ಉತ್ತಮ ಅಡಿಕೆ ಗರಿಷ್ಠ ದರ 77 ಸಾವಿರ ಗಡಿ ಸಮೀಪಿಸಿದೆ.
ಕೊಯ್ಲಿನ ಸಂದರ್ಭದಲ್ಲಿಯೇ ಏರಿದ ದರ
ಪ್ರತಿ ವರ್ಷ ಅಡಿಕೆ ಕೊಯ್ಲು ಬಂದ ತಕ್ಷಣ ದರ ಇಳಿಕೆ ಆಗುತ್ತಿತ್ತು. ಆದರೆ, ಈ ವರ್ಷ ಅರ್ಧ ಕೊಯ್ಲು ಮುಗಿದರೂ ಏರಿದ ದರ ಕುಸಿಯುತ್ತಿಲ್ಲ. ಇಂದು (ಅ.13) ಗರಿಷ್ಠ ಬೆಲೆ 66,629 ರೂ. ತಲುಪಿದೆ. ಕಳೆದ ಒಂದು ವಾರದಿಂದ ದರ ಸತತವಾಗಿ ಏರಿಕೆಯಾಗುತ್ತಿದೆ. ರೈತರ (Farmer) ನಿರೀಕ್ಷೆ ಮೀರಿ ದರ ಏರಿಕೆ ಕಾಣುತ್ತಿದೆ. ಹಸಿ ಅಡಿಕೆ ದರ ಸಹ ದಾವಣಗೆರೆಯಲ್ಲಿ ಭರ್ಜರಿ ಏರಿಕೆ ಕಂಡಿದೆ. ಪ್ರಸ್ತುತ ಪ್ರತಿ ಕ್ವಿಂಟಲ್ ಗೆ 8000 ರೂ. ದಾಖಲೆ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಸಂತಸ ತಂದಿದೆ.
ಅ.13ರ ಚನ್ನಗಿರಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 66,629
- ಕನಿಷ್ಠ ಬೆಲೆ 62,612
- ಸರಾಸರಿ ಬೆಲೆ 65,506
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಅ.13ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 66,629 ಇದ್ದು, ಕನಿಷ್ಠ ಬೆಲೆ 62,612 ರೂ., ಸರಾಸರಿ ಬೆಲೆ 65,506 ರೂ.ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾಗಿದೆ. ಅತೀ ಹೆಚ್ಚು ಮಳೆಯಾಗಿದ್ದರಿಂದ ಅಡಿಕೆ ಇಳುವರಿ ಸ್ವಲ್ಪ ಕುಸಿತ ಕಂಡಿದ್ದು, ಕೊಯ್ಲು ಬರದಿಂದ ಸಾಗಿದೆ.
ಪ್ರತಿ ದಿನ ಏರಿಕೆ
2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಮೇ ತಿಂಗಳಲ್ಲಿ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು ಕೊನೆಯಲ್ಲಿ 56,599 ರೂ. ಗೆ ಇಳಿಕೆಯಾಗಿತ್ತು. ಜುಲೈ ಮೊದಲ ವಾರ ಚೇತರಿಕೆ ಕಂಡು ಈಗ 58,099 ರೂ. ಆಗಿತ್ತು. ಆಗಸ್ಟ್ ಆರಂಭದಲ್ಲಿ ಸತತ ಏರಿಕೆ ಕಂಡು ಕ್ವಿಂಟಲ್ ಗೆ 60,500ರೂ. ತಲುಪಿತ್ತು. ಈಗ ಸೆಪ್ಟೆಂಬರ್ ನಲ್ಲಿ 62,889 ರೂ. ಇತ್ತು. ಅಕ್ಟೋಬರ್ ಆರಂಭದಿಂದ ಸತತ ಏರಿಕೆ ಕಂಡು ಇಂದು (ಅ.13) 66,629ರೂ. ಇದೆ.
- 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ
- 2024 ಮೇ ತಿಂಗಳಲ್ಲಿ ಗರಿಷ್ಠ ದರ 55 ಸಾವಿರ
- 2025 ಅಕ್ಟೋಬರ್ ನಲ್ಲಿ ಗರಿಷ್ಠ ದರ 66,629
2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.