ಡಿವಿಜಿ ಸುದ್ದಿ, ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಸಲ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಬರ್ಟ್ ಸಿನಿಮಾ ತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಬಾ, ಬಾ, ಬಾ ನಾ ರೆಡಿ ಅನ್ನೋ ಲಿರಿಕಲ್ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಅರ್ಜುನ್ ಜನ್ಯ ಹಾಡನ್ನು ಕಂಪೋಸ್ ಮಾಡಿದ್ದು, ಡಿ ಬಾಸ್ ಅಭಿಮಾನಿಗಳಿಗಾಗಿ ರೂಪಿಸಿದ್ದಂತಿದೆ. ಹಡಗು ಹಿಡಿದು ಪಡೆಯೇ ಬರಲಿ, ಹೊಸಕಿ ಬಿಡುವೆ ಕಾಲಡಿ, ಡಿ.. ಡಿ… ಬಾ ನಾ ರೆಡಿ ಅನ್ನೋ ಹಾಡಿನ ಮೊದಲ ಸಾಲು ಮಾಸ್ ಅಭಿಮಾನಿಗಳಿಗೆ ರೀಚ್ ಆಗಲಿದೆ.
ಸಿನಿಮಾ ನಿರ್ದೇಶಕ ತರುಣ್ ಸುದರ್ ಅವರು , ಡಿ ಬಾಸ್ ಅಭಿಮಾನಿಗಳಿಗೆ ಉಡುಗೋರೆಆಗಲಿದೆ ಅನ್ನೋ ಮಾಹಿತಿ ನೀಡಿದ್ದರು. ಇದೀಗ ಹಾಡು ರಿಲೀಸ್ ಆಗಿದ್ದು, ಡಿ ಬಾಸ್ ಮಾಸ್ ಆಡಿಯನ್ಸ್ ಇನ್ನಷ್ಟು ಕ್ರೇಜ್ ಹೆಚ್ಚಿಸಲಿದೆ.
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ #Roberrt ಚಿತ್ರದ ಮೊದಲ ಹಾಡು #BaBaBaNaReady ಈಗ ನಿಮ್ಮ ಮುಂದೆ. ನೋಡಿ ಆಶೀರ್ವದಿಸಿ 🙂
ನಿಮ್ಮ ದಾಸ ದರ್ಶನ್https://t.co/pluX22G9Sx@aanandaaudio @TharunSudhir @umap30071 @UmapathyFilms @StarAshaBhat pic.twitter.com/QKQMLFe8WW
— Darshan Thoogudeepa (@dasadarshan) March 3, 2020
ಟ್ವೀಟ್ ಮೂಲಕ ಹಾಡು ಬಿಡುಗಡೆಯ ಬಗ್ಗೆ ತರುಣ್ ಸುಧೀರ್ ಮಾಹಿತಿ ನೀಡಿದ್ದರು. ಡಿ ಬಾಸ್ ಅಭಿಮಾನಿಗಳಲ್ಲಿ ಸಿನಿಮಾ ರಿಲೀಸ್ ಇನ್ನಷ್ಟು ಕಾತುರತೆ ಹೆಚ್ಚಿಸಿದೆ.ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂಬ ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿದ್ದಾರೆ.



