ಡಿವಿಜಿ ಸುದ್ದಿ, ರಾಯಚೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ಮಠಕ್ಕೆ ಆಗಮಿಸಿ ನಟ ಪುನೀತ್ ರಾಜ್‍ಕುಮಾರ್ ರಾಯರ ದರ್ಶನ ಪಡೆದರು. ಶ್ರೀ ಮಠದೊಂದಿಗೆ ತಮ್ಮ ಕುಟುಂಬದ ನೆನೆಪು ಮಾಡಿಕೊಂಡ ಪುನೀತ್, ವಾರ ಬಂತಮ್ಮ ಗುರುವಾರ ಬಂತಮ್ಮ ಹಾಡು ಹೇಳಿ ಭಕ್ತಿ ಸಮರ್ಪಿಸಿದರು.

ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು. ಅವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೂ ಮುನ್ನ ವೇದಿಕೆಯಲ್ಲಿ ಕುಳಿತಿದ್ದ ಪುನೀತ್ ರಾಜ್‍ಕುಮಾರ್ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ಭಾವುಕರಾದರು.
https://twitter.com/PowerStarPunith/status/1234534959051755520
ಡಾ.ರಾಜಕುಮಾರ್ ಅವರಿಗೆ ಮಂತ್ರಾಲಯದೊಂದಿಗೆ ಇದ್ದ ಅವಿನಾಭಾವ ಸಂಬಂಧದ ಬಗ್ಗೆ ನೆನಪು ಮಾಡಿಕೊಂಡರು. ಮಂತ್ರಾಲಯಕ್ಕೆ ಹೆಚ್ಚು ಬಾರಿ ಬರದಿದ್ದರೂ ಇಲ್ಲಿನ ನೆನಪುಗಳು ಹಾಗೇ ಇವೆ ಅಂತ ಪುನೀತ್ ಹೇಳಿದರು



