ವಿಜಿಸುದ್ದಿ.ಕಾಂ, ದಾವಣಗೆರೆ: ಮಹಾನಗರ ಪಾಲಿಕೆಯ ಯುಜಿಡಿ ಇಂಜಿನಿಯರ್ ಸೋಗಿನಲ್ಲಿ 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ದಾವಣಗೆರೆ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಹಾನಗರ ಪಾಲಿಕೆಯ ಯುಜಿಡಿ ಇಂಜಿನಿಯರ್‌ಗಳು ಎಂದು ಹೇಳಿಕೊಂಡು ಪ್ರತಿಷ್ಟಿತ ಬಡಾವಣೆಯಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಬಂಧಿತನಿಂದ ೬ ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ನಾವು, ಪಾಲಿಕೆಯ ಯುಜಿಡಿ ಇಂಜಿನಿಯರ್, ನಿಮ್ಮ ಮನೆಯ ಪೈಪ್ ಲೈನ್ ಅನ್ನು ಯುಜಿಡಿ ಪೈಪ್‌ಗೆ ಲಿಂಕ್ ಮಾಡಬೇಕಿದೆ. ನಿಮ್ಮ ಮನೆಯ ಬಾತ್ ರೂಮ್ ತೋರಿಸಿ ಎಂದು ಕೇಳಿಕೊಳ್ಳುತ್ತಿದ್ದರು. ಬಾತ್ ರೂಮ್ ತೋರಿಸಿದ ನಂತರ ಅಳತೆ ಹಿಡಿದಂತೆ ಮಾಡಿ ಮಾಲೀಕರ ಗಮನ ಬೇರೆಡೆ ಸೆಳೆದ ಮನೆಯಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದರು ಎಂದು ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಹೇಳಿದರು.
ಸಿಪಿಐ ತಿಪ್ಪಣ್ಣ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಭದ್ರಾವತಿ ನಿವಾಸಿ ತರಗಾರ ಕೆಲಸ ಮಾಡುತ್ತಿದ್ದ ೨೮ ವರ್ಷದ ಎಚ್. ವೇಣುಗೋಪಾಲ್ ನನ್ನು ಭದ್ರಾವತಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ ಬೆಲೆ ಬಾಳುವ 174 ಗ್ರಾಂ ಚಿನ್ನಾಭರಣವನ್ನು ವಶಶಕ್ಕೆ ಪಡೆಯಲಾಗಿದೆ ಎಂದರು.

ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ಎಸ್. ಸುಧಾ, ಸುರೇಶ್ ಎಂಬ ದಂಪತಿಗಳ ಮನೆಯಲ್ಲಿ ಕಳೆದ ತಿಂಗಳು ೮ ರಂದು ಕಳ್ಳತನವಾಗಿತ್ತು. ಮಹಾನಗರ ಪಾಲಿಕೆಯ ಯುಜಿಡಿ ಇಂಜಿನಿಯರ್‌ಗಳು ಎಂದು ಹೇಳಿಕೊಂಡು ಬಂದಿದ್ದ ಮೂವರು ಡ್ರೈನೇಜ್ ಪೈಪ್ ಲೈನ್ ಪೇರಿ ನೆಪದಲ್ಲಿ ಮನೆಯ ಒಳಗಡೆ ಬಂದಿದ್ದರು. ಬಾತ್ ರೂಮ್‌ನ್ನು ಟೇಪ್ ನಲ್ಲಿ ಅಳತೆ ಹಿಡಿದು, ಮನೆ ಮಾಲೀಕರನ್ನು ಮೊದಲ ಮಹಡಿಗೆ ಕರೆದುಕೊಂಡು ಹೋಗಿ ಗಮನ ಬೇರೆಡೆ ಸೆಳೆದು ಬೆಳ್ಳಿ, ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಬಗ್ಗೆ ಕೆಟಿಜಿ ನಗರ ಪೊಲೀಸ್ ಠಾಣೆಯಲ್ಲಿ ಎಸ್. ಸುಧಾ ಮತ್ತು ಸುರೇಶ್ ದಂಪತಿಗಳು ದೂರು ದಾಖಲಿಸಿದ್ದರು.
ಈ ದೂರಿನ ಅನ್ವಯ ಕಳ್ಳ ಭೇಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ, ಹೆಚ್ಚುವರಿ ವರಿಷ್ಠಾಧಿಕಾರಿ ರಾಜೀವ್, ಉಪ ವರಿಷ್ಠಾಧಿಕಾರಿ ಎಂ.ಕೆ ಗಂಗಲ್ ಮಾರ್ಗದರ್ಶನದಲ್ಲಿ ದಕ್ಷಿಣ ವೃತ್ತದ ಸಿಪಿಐ ತಿಮ್ಮಣ್ಣ, ಕೆಟಿಜಿ ನಗರ ಪಿಎಸ್‌ಐ ಎ.ಕೆ ಚಂದ್ಪಪ್ಪ, ಪಿಎಸ್‌ಐ ನಾಗರಾಜ್ ಹಾಗೂ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಕೆ.ಎಲ್. ಲೋಕ್ಯಾನಾಯ್ಕ್, ಚಂದ್ರಪ್ಪ, ಯೋಗೇಶ್ ನಾಯಕ್, ಶಂಕರ್ ಜಾದವ್, ರಾಜು, ರಾಜಪ್ಪ, ಉಮೇಶ್ ಹಾಗೂ ರಾಮಚಂದ್ಪಪ್ಪ ಸಹಾಯದಿಂದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



