ದಾವಣಗೆರೆ: ಅಡಿಕೆ ತೋಟದಲ್ಲಿ ಹಂದಿಗಳನ್ನು ಹಿಡಿಯಲು ಹಾಕಿದ್ದ ಬಲೆಗೆ ಚಿರತೆ ಮರಿಯೊಂದು ಸಿಲುಕಿ ವಿಲವಿಲ ಒದ್ದಾಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.
ಬಸವಾಪಟ್ಟಣದ ರೈತ ಎಂ.ಎಸ್. ಜಯಣ್ಣ ಬೆಳಗ್ಗೆ ಜಮೀನಿಗೆ ಹೋದಾಗ ಅಡಿಕೆ ತೋಟದಲ್ಲಿ ಯಾವುದೋ ಕಾಡುಪ್ರಾಣಿ ಮರಿ ಕೂಗುವ ಶಬ್ದ ಕೇಳಿದೆ. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದ್ದಾಗ ಚಿರತೆ ಮರಿ ಬಲೆಯಲ್ಲಿ ಸಿಕ್ಕು ವಿಲವಿಲ ಒದ್ದಾಡುತ್ತಿರುವುದು ಕಂಡಿದೆ. ಅದರ ಹತ್ತಿರ ತಾಯಿ ಚಿರತೆ ಸಹ ಇದ್ದು, ಭಯಗೊಂಡು ರೈತ ಬಸವಾಪಟ್ಟಣ ಪೊಲೀಸ್ ಠಾಣೆ, ಅರಣ್ಯ ಇಲಾಣಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಚಿರತೆ ಮರಿಯನ್ನು ಬಲೆಯಿಂದ ಬಿಡಿಸಿದ್ದು, ತಾಯಿ ಹುಡುಕುತ್ತ ಗುಡ್ಡದ ಕಡೆಗೆ ಓಡಿದೆ ಹೋಗಿದೆ. ಚಿರತೆಯನ್ನು ಹಿಡಿಯಲು ಸ್ಥಳದಲ್ಲಿ ಬೋನು ಅಳವಡಿಸಿದ್ದು, ಮೂರು ದಿನಗಳ ಕಾಲ ಯಾರೂ ಅತ್ತಕಡೆ ಹೋಗಬಾರದು ಎಂದು ಅರಣ್ಯ ಉಪ ವಲಯಾಧಿಕಾರಿ ಮನೋಹರ್ ತಿಳಿಸಿದ್ದಾರೆ.



