ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಆರ್ ಟಿಒ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಮಾ.3 ರೊಳಗೆ ನಿಗದಿಪಡಿಸಿದ ತೆರೆ ಸಂಗ್ರಹವಾಗಿಲ್ಲ. ಹೀಗಾಗಿ ಮಾ.1 ರಿಂದ 3 ವರೆಗೆ ನಗರದ ವಿವಿಧ ಕಡೆ ಆರ್ ಟಿಒ ಅಧಿಕಾರಿಗಳು ದಾಳಿ ಮಾಡಲಿದ್ದು, ನಿಮ್ಮ ವಾಹನಗಳಿಗೆ ಸೂಕ್ತ ದಾಖಲೆ ಇಲ್ಲದಿದ್ದಲ್ಲಿ ಭಾರೀ ದಂಡ ಬೀಳಲಿದೆ.
ಜಿಲ್ಲೆಯಲ್ಲಿ 2019-20ನೇ ಸಾಲಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ವಾರ್ಷಿಕ ಗುರಿ 105 ಕೋಟಿ 26 ಲಕ್ಷಗಳ ತೆರಿಗೆ ಸಂಗ್ರಹ ಗುರಿಯನ್ನು ನಿಗದಿಗೊಳಿಸಿದ್ದು, ಫೆ. 28 ವರೆಗೆ ಕೇವಲ 89 ಕೋಟಿ 33 ಲಕ್ಷ ಮಾತ್ರ ಸಂಗ್ರಹವಾಗಿದೆ. ಆದಾಯ ಆದಾಯ ಸಂಗ್ರಹಕ್ಕೆ ಮಾ.03 ಮಾಡಿ ನಿಗದಿತ ಗುರಿ ಸಾಧಿಸಬೇಕಾಗಿರುತ್ತದೆ. ಹೀಗಾಗಿ ಮಾ. 1 ರಿಂದ 3 ವರೆಗೆ ನಗರದ ವಿವಿಧ ಭಾಗದಲ್ಲಿ ವಾಹನ ದಾಖಲೆ ಪರಿಶೀಲಿಸಿ ದಂಡ ಹಾಕಲಾಗುವುದು ಎಂದು ಆರ್ ಟಿಒ ಕಚೇರಿ ಎಚ್ಚರಿಕೆ ನೀಡಿದೆ.
ಮಾ.01 ರಿಂದ ಮೋಟಾರು ವಾಹನಗಳ ನಿರೀಕ್ಷಕರು ಜಿಲ್ಲಾಯಾದ್ಯಂತ ವಿಶೇಷ ತನಿಖೆಯನ್ನು ಕೈಗೊಂಡು ಅನಧಿಕೃತವಾಗಿ ಸಂಚರಿಸುವ ಮೋಟಾರು ವಾಹನಗಳನ್ನು ತಪಾಸಣೆ ಮಾಡಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳವರು. ಮೋಟಾರು ವಾಹನ ಮಾಲೀಕರು ಹಾಗೂ ಚಾಲಕರುಗಳು ತಮ್ಮ ತಮ್ಮ ವಾಹನಗಳೊಂದಿಗೆ ವಾಯಿದೆ ಇರುವ ದಾಖಲಾತಿಗಳನ್ನು ಇಟ್ಟುಕೊಳ್ಳತಕ್ಕದ್ದು ಎಂದು ಸೂಚಿಸಿದೆ.
ಸೂಕ್ತ ದಾಖಲೆ ಇಲ್ಲದಿದ್ದರೆ ವಾಹನವನ್ನು ಕಾನೂನು ರೀತಿ ವಶಕ್ಕೆ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ.ಬಣಕಾರ್ ತಿಳಿಸಿದ್ದಾರೆ.



