ಚಾಮರಾಜನಗರ: ಸರ್ಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬದ್ಧವಾಗಿದೆ. ಶೀಘ್ರದಲ್ಲೇ 18,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದರಲ್ಲಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ 13,500 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕೇವಲ 5,428 ಶಿಕ್ಷಕರ ನೇಮಕ ಮಾಡಿಕೊಂಡಿತ್ತ ಎಂದರು.
3,000 ಹೊಸ ಕೊಠಡಿಗಳ ನಿರ್ಮಾಣ
ರಾಜ್ಯದಲ್ಲಿ ಶಾಲಾ ಕೊಠಡಿಗಳ ಅಭಾವ ಮತ್ತು ಶಿಥಿಲಾವಸ್ಥೆಯ ಸಮಸ್ಯೆ ಹೊಸದೇನಲ್ಲ. ರಾಜ್ಯದಲ್ಲಿ ಒಟ್ಟು 46,000 ಶಾಲೆಗಳಿದ್ದು, ಹಲವು ಸಮಸ್ಯೆಗಳು ವರ್ಷಗಳಿಂದ ಮುಂದುವರಿದಿವೆ.ವಿವೇಕ ಯೋಜನೆ ಅಡಿಯಲ್ಲಿ 8,200 ಕೊಠಡಿಗಳು ಪೂರ್ಣಗೊಂಡಿವೆ.
ಶೀಘ್ರದಲ್ಲೇ 3,000 ಹೊಸ ಕೊಠಡಿಗಳ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಲಿದೆ.ಹಿಂದಿನ ಸರ್ಕಾರ ಸಾಲ ಮಾಡಿ ಬಿಟ್ಟಿದ್ದನ್ನು ಈಗಿನ ಸರ್ಕಾರ ತೀರಿಸಿದೆ. 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುವ ಉದ್ದೇಶ ಸರ್ಕಾರ ಹೊಂದಿದೆ ಎಂದರು.



