ಬೆಂಗಳೂರು: ಹಿಂದೂಸ್ಥಾನ್ ಏರೋನ್ಯಾಟಿಕ್ಸ್ .ಲಿ (HAL) ಟೆಕ್ನಿಕಲ್ ಟ್ರೇನಿಂಗ್ ಇಸ್ಟಿಟ್ಯೂಟ್ ಬೆಂಗಳೂರಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ (apprenticeship) ಹಮ್ಮಿಕೊಳ್ಳಲಾಗಿದೆ.
ಯಾವ ವಿಭಾಗದಲ್ಲಿ ತರಬೇತಿ..?
ಫಿಟ್ಟರ್, ಟರ್ನರ್, ಮೇಷಿನಿಷ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಫೌಂಡ್ರೀ ಮ್ಯಾನ್, ಶೀಟ್ ಮೆಟಲ್ ವರ್ಕರ್, ಟ್ರೇಡ್ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಕಾರ್ ಪೇಂಟರ್, ಟೂಲ್ ಅಂಡ್ ಡೈ ಮೇಕರ್, ಸಿಎನ್ ಸಿ ಪ್ರೋಗ್ರಾಮರ್ ಹಾಗೂ ಆಪರೇಟರ್, ಮೆಕಾನಿಕ್ ರೆಫ್ರೀಜರೇಷನ್ ಮತ್ತು ಏರ್ ಕಂಡೀಷನಿಂಗ್ ಗಳಿಗೆ ಫುಲ್ ಟರ್ಮ್ ಅಪ್ರೆಂಟಿಸ್ ಟ್ರೇನಿಂಗ್ ತರಬೇತಿ ನೀಡಲಾಗುವುದು.
ಅಸಕ್ತ ಅರ್ಹ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮೂಲಕ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ: ಐಟಿಐ ತೇರ್ಗಡೆ ಹೊಂದಿರಬೇಕು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ https://apprenticeshipindia.gov.in/candidate-registration ನಲ್ಲಿ ನೋಂದಾಯಿಸಿ ಅರ್ಜಿ ನಮೂನೆಯಲ್ಲಿ ಅಪ್ರೇಂಟಿಸ್ ನೋಂದಣಿ ಸಂಖ್ಯೆ ನಮೂದಿಸುವುದು ಹಾಗೂ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸ್ಟೈಫಂಡ್( ಸರ್ಕಾರ ನಿಗಧಿಪಡಿಸಿದಂತೆ) ನೀಡಲಾಗುವುದು.
ಯಾವ ದಾಖಲೆ ಅಗತ್ಯ..?
ಭರ್ತಿ ಮಾಡಿದ ಅರ್ಜಿಯನ್ನು ಈ ಕಚೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 30-09-2025 ಅರ್ಜಿಯೊಂದಿಗೆ ಅಭ್ಯರ್ಥಿಯು ಇತ್ತೀಚಿನ ಪಾಸ್ ಪೋರ್ಟ್ ಆಳತೆಯ ಭಾವ ಚಿತ್ರ ಅಂಟಿಸಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐ.ಟಿ.ಐ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಎನ್.ಟಿ.ಸಿ ಸರ್ಟಿಫೀಕೆಟ್, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.



