ದಾವಣಗೆರೆ: ನಗರದ ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ ಕಳುವಾದ / ಕಳೆದು ಹೋದ ಮೊಬೈಲ್ ಪೋನ್ ಗಳನ್ನು CEIR PORTAL ಮೂಲಕ 53 ಮೊಬೈಲ್ಗಳನ್ನು ವಾರಸುದಾರರಿಗೆ ಕೆಟಿಜೆ ನಗರ ಪೊಲೀಸ್ ಹಸ್ತಾಂತರ ಮಾಡಿದ್ದಾರೆ
10 ಲಕ್ಷ ಮೌಲ್ಯದ ಮೊಲೈಲ್ ವಶ
ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI ನಂಬರನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ ಮೊಬೈಲ್ಗಳ ಪೈಕಿ 53 ಮೊಬೈಲ್ಗಳನ್ನು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪತ್ತೆ ಮಾಡಿದ್ದು, ಇಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ಪತ್ತೆಯಾದ ಮೊಬೈಲ್ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು. ಪತ್ತೆಯಾದ ಮೊಬೈಲ್ಗಳ ಅಂದಾಜು ಮೊತ್ತ 10 ಲಕ್ಷಕ್ಕೂ ಹೆಚ್ಚು ಆಗಿರುತ್ತದೆ.
ಸಾರ್ವಜನಿಕರ ಗಮನಕ್ಕೆ
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಳುವಾದ / ಕಳೆದು ಹೋದ ಮೊಬೈಲ್ ಪೋನ್ಗಳನ್ನು ವಾರಸುದಾರರು ಮೊಬೈಲ್ KSP ಮೊಬೈಲ್ App ಮೂಲಕ e-lost ನಲ್ಲಿ ದೂರು ದಾಖಲಿಸಿ, ದೂರಿನ ಸ್ವೀಕೃತಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು, ನಂತರ ‘CEIR’ web portal (https://www.ceir.gov.in) ಗೆ ಬೇಟಿ ನೀಡಿ KSP ಮೊಬೈಲ್ App ಮೂಲಕ ಡೌನ್ಲೋಡ್ ಮಾಡಿಕೊಂಡ ದೂರಿನ ಸ್ವೀಕೃತಿ ಪ್ರತಿ ಹಾಗೂ ಆಧಾರ್ / ಇತರೆ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಿ ಮೊಬೈಲ್ ಬ್ಲಾಕ್ ಮಾಡುವ ವಿಧಾನವನ್ನು ತಿಳಿಸಲಾಗಿರುತ್ತದೆ