ದಾವಣಗೆರೆ: ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 2.55 ಲಕ್ಷ ಮೌಲ್ಯದ 8 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಹರಿಹರ ನಗರದ ಬಜಾರ್ ಮೊಹಲ್ಲಾ ವಾಸಿಯಾದ ಅಬ್ದುಲ್ ವಾಹಿದ್ ಬೈಕ್ ಕಳ್ಳತನವಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಬೈಕ್ ಕಳ್ಳತನ ಪ್ರಕರಣದ ಆರೋಪಿತರ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ ಎಸ್ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ ಆರ್.ಎಫ್. ದೇಸಾಯಿ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಎಷ್ಟು ಮೌಲ್ಯದ ಬೈಕ್ ವಶ
ಈ ತಂಡವು ಕಾರ್ಯಚರಣೆ ಕೈಗೊಂಡಿದ್ದು, ತಾಂತ್ರಿಕ ಹಾಗೂ ಭಾತ್ಮಿಧಾರರ ಮಾಹಿತಿ ಮೇರೆಗೆ ಆರೋಪಿತರ ಸುಳಿವು ಪಡೆದು ಬೈಕ್ ಕಳ್ಳತನದ ಆರೋಪಿತರಾದ 1] ತನ್ವೀರ್ ಖಾನ್ 2] ಸಮೀವುಲ್ಲಾ @ ಸಮೀರ್ 3] ಮುಬಾರಕ್ ಎಲ್ಲರೂ ಹರಿಹರ ವಾಸಿಗಳಾಗಿದ್ದು ಇವರನ್ನು ದಸ್ತಗಿರಿ ಮಾಡಿದ್ದು, ಬಂಧಿತರಿಂದ ಅಂದಾಜು 2,55,000/-ರೂ ಬೆಲೆಯ 08 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಲಾಗಿರುತ್ತದೆ.
ಎಲ್ಲೆಲ್ಲಿ ಪ್ರಕರಣ ದಾಖಲು..?
ವಶಪಡಿಸಿಕೊಂಡ ಬೈಕ್ ಗಳಲ್ಲಿ ಹರಿಹರ ನಗರ ಠಾಣೆಯ 06 ಪ್ರಕರಣಗಳು ಹಾಗೂ ರಾಣೆಬೆನ್ನೂರು ನಗರದ 01 ಪ್ರಕರಣ, ಮಲೆಬೆನ್ನೂರು ಠಾಣೆಯ 01 ಪ್ರಕರಣಕ್ಕೆ ಸಂಬಂಧಿಸಿದವುಗಳಾಗಿರುತ್ತವೆ. ಆರೋಪಿತರು ಹಾಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಪತ್ತೆ ಕಾರ್ಯದಲ್ಲಿ ಭಾಗಿಯಾದ ತಂಡಕ್ಕೆ ಪ್ರಶಂಸೆ
ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಪೊಲೀಸ್ ನಿರೀಕ್ಷರಾದ ಆರ್.ಎಫ್. ದೇಸಾಯಿ, ಪಿ.ಎಸ್.ಐ ಶ್ರೀಪತಿ ಗಿನ್ನಿ, ಸಿಬ್ಬಂದಿಗಳಾದ ನಾಗರಾಜ ಸುಣಗಾರ, ದಿಲೀಪ್. ಕೆ.ಸಿ, ಶಾಂತರಾಜ್ ಎಂ.ಎಸ್, ಸಿದ್ದೇಶ.ಹೆಚ್, ಮಂಜುನಾಥ ಕ್ಯಾತಮ್ಮನವರ್, ದೇವರಾಜ್ ಸೂರ್ವೆ, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.



