ದಾವಣಗೆರೆ: ಬೆಸ್ಕಾಂನಿಂದ ಆ.18ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆವರೆಗೆ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ವಿವಿಧ ಫೀಡರ್‌ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ…?
ಎಫ್-11 ವಾಟರ್ ವರ್ಕರ್ಸ್ ವ್ಯಾಪ್ತಿಯ
ದೂರದರ್ಶನ ಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಸರ್ಕ್ಯೂಟ್ ಹೌಸ್, ಭೂಸೇನಾ ನಿಗಮ, ಜಿಲ್ಲಾ ಪಂಚಾಯಿತಿ ಕಚೇರಿ ಹಾಗೂ ಸುತ್ತಮತ್ತಲಿನ ಪ್ರದೇಶಗಳು.
ಎಫ್-13 ಇಂಡಸ್ಟ್ರಿಯಲ್ ಫೀಡರ್ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾ, ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯ ನಗರ, ಎಸ್.ಎ. ರವೀಂದ್ರನಾಥ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶಗಳು.
ಎಫ್ -15 ರಂಗನಾಥ ಫೀಡರ್‌ವ್ಯಾಪ್ತಿಯ ಯುಬಿಡಿಟಿ ಲೇಡಿಸ್ ಹಾಸ್ಟೆಲ್, ಜಮುನಾ ವಾಣಿಜ್ಯ ಮಳಿಗೆ, ಸವಿತಾ ಹೋಟೆಲ್, ವಿದ್ಯಾನಗರ, ತರಳಬಾಳು ಬಡಾವಣೆಗಾಂಧಿ ಮೂರ್ತಿ ವೃತ್ತದಿಂದ ಈಶ್ವರ ಪಾರ್ವತಿ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಎಫ್-22 ಎಸ್ ಎಸ್ ಹೈಟೆಕ್ ವ್ಯಾಪ್ತಿಯ ಎಸ್.ಒ.ಜಿ. ಕಾಲೋನಿ ಎ, ಬಿಮತ್ತು ಸಿ ಬ್ಲಾಕ್, ಬುದ್ಧಬಸವಭೀಮ ನಗರ, ಕರ್ನಾಟಕರಾಜ್ಯ ಬೀಜ ನಿಗಮ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್
ಸೇವೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.,



