ಡಿವಿಜಿ ಸುದ್ದಿ, ಕಲಬುರಗಿ: ಒಂದು ವರ್ಷದೊಳಗೆ ಶಾಸಕ ಅಪ್ಪುಗೌಡ ( ದತ್ತಾತ್ತೇಯ ಪಾಟೀಲ್ ) ಅವರಿಗೆ ಸಚಿವ ಸ್ಥಾನ ನೀಡದಿದ್ದರೆ, 10 ಶಾಸಕರ ರಾಜೀನಾಮೆ ನೀಡಲಿದ್ದಾರೆ ಎಂದು ಶ್ರೀ ಶೈಲ ಸಾರಂಗ ಮಠದ ಪೀಠಾಧಿಪತಿ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಾಸಕ ದತ್ತಾತ್ರೇಯ ಪಾಟೀಲ್ ಹುಟ್ಟುಹಬ್ಬ ನಿಮಿತ್ತ ಕಲಬುರಗಿಯ ಎನ್.ವಿ ಮೈದಾನದಲ್ಲಿ ಆಯೋಜಿಸಿದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಬಿಜೆಪಿಯನ್ನು ಒಂದು ನಾಯಿ ಸಹ ಕೇಳುತ್ತಿರಲಿಲ್ಲ. ಅಂತಹ ಸಮಯದಲ್ಲಿ ದಿ.ಚಂದ್ರಶೇಖರ್ ಪಾಟೀಲ್ ಪಕ್ಷ ಕಟ್ಟಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಇದೀಗ ಅವರ ಪುತ್ರ ದತ್ತಾತ್ರೇಯ ಪಾಟೀಲ್ ಸಚಿವನಾಗಲೇಬೇಕು ಎಂದು ಒತ್ತಾಯಿಸಿದರು.
ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾಗ ಒಂದು ವರ್ಷ ಸಮಯ ಕೇಳಿದ್ದಾರೆ.ಆಗಲೂ ಸಚಿವ ಸ್ಥಾನ ಸಿಗದಿದ್ದರೆ, 10 ಜನ ಶಾಸಕರ ರಾಜೀನಾಮೆ ಕೊಡಿಸುತ್ತೇವೆ ಎಂದು ಶಿವಾಚಾರ್ಯ ಗುಡುಗಿದರು.
ಯಡಿಯೂರಪ್ಪ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಯೂ ಮುಖ್ಯಮಂತ್ರಿ ಆಗಬೇಕು. ಅವರ ನಂತರ ಮುಂದಿನ 30 ವರ್ಷ ಯಾರು ಲಿಂಗಾಯತ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಗುವುದಿಲ್ಲ. ಯಡಿಯೂರಪ್ಪ ಆರೋಗ್ಯದಲ್ಲಿ ಸಮಸ್ಯೆಯಾದರೆ ಕರುಣಾನಿಧಿಯಂತೆ ಆಸ್ಪತ್ರೆಯಿಂದ ಆಡಳಿತ ನೋಡಿಕೊಳ್ಳಲಿ ಎಂದರು.