ದಾವಣಗೆರೆ: ನಗರದ ರಾಮ್ ಅಂಡ್ ಕೋ ವೃತ್ತ ಬಳಿಯ ಬೀಡಾ ಅಂಗಡಿಯೊಂದರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮೇಲೆ ದಾಳಿ ಮಾಡಿದ ಬಡಾವಣೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಾಜು ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಉತ್ತರ ಭಾರತ ಮೂಲದ ರಾಜು ಅಲಿಯಾಸ್ ಪ್ಯಾರಿಲಾಲ್, ಹಲವು ವರ್ಷಗಳಿಂದ ಬೀಡಾ ಅಂಗಡಿ ನಡೆಸುತ್ತಿದ್ದನು. ಗಾಂಜಾವನ್ನು ಚಾಕಲೇಟ್ ಮತ್ತು ಇತರ ವಸ್ತುಗಳಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದನೆಂದು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.