ದಾವಣಗೆರೆ: ತುಂಗಭದ್ರಾ ನದಿಗೆ ಹಾರಲು ಹೋಗಿದ್ದ ತಾಯಿ ಮಗುವನ್ನು 112 ಹೊಯ್ಸಳ ತುರ್ತು ಸ್ಪಂದನೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಇಂದು (ಜು.1) ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತುಂಗಭದ್ರಾ ಸೇತುವೆ ಬಳಿ ಓರ್ವ ಮಹಿಳೆ ಹಾಗೂ ತನ್ನ ಮಗುವಿನೊಂದೊಂದಿಗೆ ತುಂಗಭದ್ರಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕಂಡುಬಂದಿದ್ದು, ಆಗ ಅಲ್ಲಿನ ಸ್ಥಳೀಯರೊಬ್ಬರು ಕೂಡಲೇ 112 ಕ್ಕೆ ಕರೆ ಮಾಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿ ಎ.ಎಸ್.ಐ ಅಶೋಕ ರೆಡ್ಡಿ ಹಾಗೂ ಹೊಯ್ಸಳ ವಾಹನ ಚಾಲಕರಾದ ಲೋಕೇಶ್ ರವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಸದರಿ ಸಂತ್ರಸ್ತೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ. ನಂತರ ಸದರಿ ಸಂತ್ರಸ್ತೆ ಸಾಂತ್ವನ ಮಾಡಿ ವಿಚಾರಿಸಿದ್ದು, ಹೊನ್ನಾಳಿ ತಾಲ್ಲೂಕಿನ ಸಂತ್ರಸ್ತೆಯು ಕೌಟಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ನದಿಗೆ ಹಾರಲು ಪ್ರಯತ್ನಿಸಿರುವುದಾಗಿ ತಿಳಿಸಿರುತ್ತಾರೆ.
ಸಂತ್ರಸ್ತೆ ಹಾಗೂ ಮಗುವನ್ನು ಹೊನ್ನಾಳಿ ಠಾಣೆಗೆ ಕರೆದೋಯ್ದು ಹೊನ್ನಾಳಿ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ ರವರ ಬಳಿ ಹಾಜಾರು ಪಡಿಸಿದ್ದು, ಪಿಐ ಹೊನ್ನಾಳಿಯವರು ಸದರಿ ಮಹಿಳೆಗೆ ಸಾಂತ್ವನ ಹೇಳಿ , ದೈರ್ಯ ತುಂಬಿ ಉಪಚರಿಸಿ ಸದರಿ ಸಂತ್ರಸ್ತೆ & ಮಗುವನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಕೌಟಂಬಿಕ ಕಲಹದಿಂದ ಮನನೊಂದು ನದಿಗೆ ಹಾರಲು ಹೋಗಿದ್ದ ತಾಯಿ ಮಗು ರಕ್ಷಣೆ ಕಾರ್ಯದಲ್ಲಿ ಯಶಸ್ವಿಯಾದ 112 ಹೊಯ್ಸಳ ಅಧಿಕಾರಿಗಳಿಗೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



