Connect with us

Dvgsuddi Kannada | online news portal | Kannada news online

ಏಷ್ಯಾ ಇಲೆವೆನ್ ತಂಡದಲ್ಲಿ ಕನ್ನಡಿಗ ರಾಹುಲ್, ಕೊಹ್ಲಿ ಸೇರಿ 5 ಆಟಗಾರರು, ಪಾಕಿಸ್ತಾನ ಆಟಗಾರಗಿಲ್ಲ ಸ್ಥಾನ

ಪ್ರಮುಖ ಸುದ್ದಿ

ಏಷ್ಯಾ ಇಲೆವೆನ್ ತಂಡದಲ್ಲಿ ಕನ್ನಡಿಗ ರಾಹುಲ್, ಕೊಹ್ಲಿ ಸೇರಿ 5 ಆಟಗಾರರು, ಪಾಕಿಸ್ತಾನ ಆಟಗಾರಗಿಲ್ಲ ಸ್ಥಾನ

ಢಾಕಾ: ತಮ್ಮ ದೇಶದ ಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮಶತಮಾನೋತ್ಸವ ಅಂಗವಾಗಿ  ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಈ ವರ್ಷದ ಮಾರ್ಚ್ ನಲ್ಲಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ನಡುವೆ ಎರಡು ಟಿ20 ಟೂರ್ನಿ ಆಯೋಜಿಸಿದೆ. ಈ ಟೂರ್ನಿಯಲ್ಲಿ ಕನ್ನಡಿಗ ರಾಹುಲ್, ಕೊಹ್ಲಿ ಸೇರಿ 5 ಆಟಗಾರರು ಸ್ಥಾನ ಪಡೆದಿದ್ದಾರೆ.

ವಿಶ್ವ ಕ್ರಿಕೆಟ್‍ನ ಕೆಲವು ಸ್ಟಾರ್ ಆಟಗಾರರು ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಸ್ನೇಹಪರ ಪಂದ್ಯದ ಭಾಗವಾಗಲಿದ್ದಾರೆ. ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಏಷ್ಯಾ ಇಲೆವೆನ್‍ನ ತಂಡ 15 ಆಟಗಾರರ ಪಟ್ಟಿಯನ್ನು ಬಿಸಿಬಿ ಬಿಡುಗಡೆಗೊಳಿಸಿದೆ.

bangladesh

ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ ಐವರು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ.  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ವೇಗಿ ಮೊಹಮ್ಮದ್ ಶಮಿ ಏಷ್ಯಾ ಇಲೆವೆನ್ ಪರ ಆಡಲಿದ್ದಾರೆ.  ಏಷ್ಯಾ ಇಲೆವೆನ್‍ನಲ್ಲಿ ಭಾರತ ಹೆಚ್ಚಿನ ಆಟಗಾರನ್ನು ಹೊಂದಿದೆ. ರಿಷಬ್ ಪಂತ್ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ.  ಬಾಂಗ್ಲಾದೇಶದ ನಾಲ್ವರು ತಮೀಮ್ ಇಕ್ಬಾಲ್, ಲಿಟನ್ ದಾಸ್ ಮತ್ತು ಮುಷ್ಫಿಕರ್ ರಹೀಮ್ ಮತ್ತು ಮುಸ್ತಾಫಿಜುರ್ ರಹಮಾನ್,  ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಿಂದ ತಲಾ 2 ಆಟಗಾರರು ಪಾಲ್ಗೊಳ್ಳಲಿದ್ದಾರೆ. 15 ಸದಸ್ಯರಲ್ಲಿ  ಪಾಕಿಸ್ತಾನದ ಯಾವ  ಆಟಗಾರನನ್ನು ಸೇರಿಸಲಾಗಿಲ್ಲ. ನೇಪಾಳದ ಪರ ಸಂದೀಪ್ ಲಮಿಚಾನೆ ಆಯ್ಕೆಯಾಗಿದ್ದಾರೆ.

ಏಷ್ಯಾ ಇಲೆವೆನ್ ತಂಡ:
ಕೆ.ಎಲ್. ರಾಹುಲ್, ಶಿಖರ್ ಧವನ್, ತಮೀಮ್ ಇಕ್ಬಾಲ್, ವಿರಾಟ್ ಕೊಹ್ಲಿ, ಲಿಟಾನ್ ದಾಸ್, ರಿಷಭ್ ಪಂತ್, ಮುಶ್ಫಿಕೂರ್ ರಹೀಮ್, ಥಿಸರಾ ಪೆರೆರಾ, ರಶೀದ್ ಖಾನ್, ಮುಸ್ತಾಫಿಜುರ್ ರಹಮಾನ್, ಸಂದೀಪ್ ಲಾಮಿಚ್ಚಾನೆ, ಲಸಿತ್ ಮಾಲಿಂಗ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top