ದಾವಣಗೆರೆ: ನೀವು ಏನಾದರೂ ಸಣ್ಣ ಪ್ರಮಾಣದ ಉದ್ಯಮ ಪ್ರಾರಂಭ ಮಾಡುವ ಉದ್ದೇಶ ಹೊಂದಿದ್ದರೆ, ದಾವಣಗೆರೆ ಮಹಾನಗರ ಪಾಲಿಕೆ ತ್ಯಾಜ್ಯ ಘಟಕದಲ್ಲಿ ಸ್ವಸಹಾಯ ಸಂಘಗಳಿಗೆ ಅವಕಾಶ ಕಲ್ಪಿಸಿದೆ. ಏನದು ಉದ್ಯಮ..? ಇಲ್ಲದೆ ಮಾಹಿತಿ…
ಎಳನೀರು ಬುರುಡೆಯಿಂದ ಹಗ್ಗ ಸಿದ್ಧಪಡಿಸುವ ಘಟಕ
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಎಳನೀರು ಬುರುಡೆ ತ್ಯಾಜ್ಯಗಳನ್ನು ಸಂಸ್ಕರಿಸಿ ಕೊಕೋಪೀಟ್ & ನಾರಿನ ಹಗ್ಗ ಸಿದ್ಧಪಡಿಸುವ ಸಲುವಾಗಿ ಆಸಕ್ತ ಸ್ವ-ಸಹಾಯ ಸಂಘ, ಸರ್ಕಾರೇತರ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಸಲ್ಲಿಸಬಹುದು. ಆಸಕ್ತರು ಜೂನ್ 30 ರೊಳಗಾಗಿ ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ದುರ್ಗಾಶಕ್ತಿ ಮಹಿಳಾ ಸ್ವ-ಸಹಾಯ ಸಂಘದಿಂದ ಅರ್ಜಿ ಸಲ್ಲಿಕೆ
ಸ್ವಂತ ವೆಚ್ಚದಲ್ಲಿ ಅವರಗೊಳ್ಳ ತ್ಯಾಜ್ಯ ಜಮೀನಿನಲ್ಲಿ ಆರಂಭಿಸುವ ಸಲುವಾಗಿ 10 ವರ್ಷಗಳ ಅವಧಿಗೆ 10,500 ಅಡಿ ಜಾಗವನ್ನು ಬಾಡಿಗೆ ಆಧಾರದಲ್ಲಿ ಒದಗಿಸುವಂತೆ ಕೋರಿ, ದುರ್ಗಾಶಕ್ತಿ ಮಹಿಳಾ ಸ್ವ-ಸಹಾಯ ಸಂಘ, ಎಸ್.ಓ.ಜಿ ಕಾಲೋನಿ ಪ್ರಾಸ್ತಾವನೆ ಸಲ್ಲಿಸಿದ್ದಾರೆ.



