ದಾವಣಗೆರೆ: ಸಿಡಿಲು ಬಡಿದು ನಾಲ್ಕು ಹಸು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹರಿಹರ ಕೊಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ( ಜೂ.11) ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯ ನಾಗರಾಜಯ್ಯ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ಸಾವನ್ನಪ್ಪಿವೆ.
ಸ್ಥಳಕ್ಕೆ ಉಪತಹಶೀಲ್ದಾರ್ ರವಿ, ರಾಜಸ್ವನಿರೀಕ್ಷಕ ಆನಂದ್, ಗ್ರಾಮಾಡಳಿತಾಧಿಕಾರಿ ಅಣ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಹಸುವಿನ ಮಾಲೀಕನಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.



