ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ಸತತ ಕುಸಿತ ಕಾಣುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ಸತತ ಕುಸಿಯುತ್ತಿದೆ. ಇಂದು (ಜೂ. 9) ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್ ಗೆ 58,691 ರೂ.ಇದೆ.
ಜೂ.9ರ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 58,691
- ಕನಿಷ್ಠ ಬೆಲೆ 53,099
- ಸರಾಸರಿ ಬೆಲೆ 57,543
ಬೆಟ್ಟೆ ಅಡಿಕೆ ದರ
- ಗರಿಷ್ಠ ಬೆಲೆ 31,889
- ಕನಿಷ್ಠ ಬೆಲೆ 31,789
- ಸರಾಸರಿ ಬೆಲೆ 31,822
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಜೂ.9ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 58,691 ಇದ್ದು, ಕನಿಷ್ಠ ಬೆಲೆ 53,099 ರೂ., ಸರಾಸರಿ ಬೆಲೆ 57,543 ರೂ.ಇದೆ.
ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ತಂದಿದೆ.
2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿ ದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಏಪ್ರಿಲ್ 23ರಂದು ಗರಿಷ್ಠ ಬೆಲೆ 60,669 ರೂ. ಇತ್ತು. ಮೇ ತಿಂಗಳ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು, ಮತ್ತಷ್ಟು ದರ ಕಡಿತವಾಗಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.



