ಡಿವಿಜಿಸುದ್ದಿ, ಚನ್ನಗಿರಿ: ತಾಲೂಕಿ ಹರಿಜನರ ಕಾಲೋನಿಯಿಂದ ಹಿಡಿದು ಎಲ್ಲಾ ಕಡೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಸಹಕಾರ ಕಾರಣ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಹಿರೇ ಕೋಗಲೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಗೋಮಾಳದ ಜಮೀನಿನಲ್ಲಿ ನಿವೇಶನಕ್ಕಾಗಿ ಆರು ಎಕೆರೆ ಜಮೀನು ಮುಂಜೂರಾಗಿದೆ. ಅಲ್ಲಿ ಕೆಲವರು ಸಾಗುವಳಿ ಪತ್ರ ಿಲ್ಲದವರು ಸಾಗುವಳಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಯಾರು ಸಾಗುವಳಿ ಪಡೆಯಲು ಅರ್ಜಿಯನ್ನು ನೀಡಿದ್ದರೂ, ಅಂಥವರನ್ನು ಪರಿಗಣಿಸಲಾಗುವುದು. ಒಬ್ಬೊಬ್ಬ ಪಲಾನುಭವಿ ನಾಲ್ಕರಿಂದ ಐದು ಎಕೆರೆ ವರೆಗೆ ಜಮೀನು ಸಾಗುವಳಿ ಮಾಡಿದ್ದಾರೆ. ನಿಯಮ ಪ್ರಕಾರ ಒಂದು ಎಕೆರೆ ವರೆಗೆ ಜಮೀನು ನೀಡಲು ಅವಕಾಶವಿದೆ ಎಂದು ತಿಳಿಸಿದರು.
ರೈತರಿಗೆ ಸರಿಯಾಗಿ ವಿದ್ಯುತನ್ನು ನೀಡದೆ ತೊಂದರೆಕೊಟ್ಟರೆ ಸುಮ್ಮನಿರಲ್ಲ ಎಂದು ವೇದಿಕೆಯಲ್ಲಿದ್ದ ಜಿ.ಪಂ ಸದಸ್ಯೆ ಸಾಕಮ್ಮ ತಾ.ಪಂ ಸದಸ್ಯೆ ವೀಣಾಕುಮಾರಿ , ಅನುಭಾಗ್ಯಮ್ಮ ಜಗದೀಶ್, ಶಂಕ್ರಮ್ಮ ರವೀಂದ್ರಕುಮಾರ್ ಬೆಸ್ಕಾಂ ಅಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ್ , ತಾಲೂಕ್ ಕಾರ್ಯನಿರ್ವಹಕ ಪ್ರಕಾಶ್ , ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಮಂಜುನಾಥ್ , ಇಂಜಿನೀಯರ್ ವಿಜಯ್ ಕುಮಾರ್ ಪುವಯ್ಯ , ಸತ್ಯನಾರಯಣ ಶೆಟ್ರು ಅರಣ್ಯ ಇಲಾಖೆ ಅಧಿಕಾರಿ ಮಾವಿನ ಹೊಳೆಯಪ್ಪ , ಮೀನುಗಾರಿಕೆ ನಿರ್ದೇಶಕರು ಗಣೇಶ , ಕೃಷಿ ನಿರ್ದೇಶಕರು ಶಿವುಕುಮಾರ್ ತಾಲೂಕ್ ಆರೋಗ್ಯ ಆಧಿಕಾರಿ ಪ್ರಭು , ಮಂಜುನಾಥ್ ವೈದ್ಯಾಧಿಕಾರಿ , ಗ್ರಾಮ ಪಂಚಾಯಿತಿ ಪಿಡಿಒ ಶೇರ್ ಆಲಿ , ಗ್ರಾಮದ ಮುಖಂಡರಾದ ಹೆಚ್ ಯು ಮಲ್ಲಿಕಾರ್ಜುನಪ್ಪ ಹಾದಿಮನೆ , ಜಗದೀಶ್ ಗೌಡ ,ಹೆಚ್ ಆರ್ ವೀರಭದ್ರಪ್ಪ ,ಚಿಕ್ಕಣ್ಣ , ಮಂಜುನಾಥ್ , ಹಾದಿಮನೆ ಶಂಕರಪ್ಪ ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಹಾಕಾರ ಸಂಘ , ಗಂಗಾಪರಮೇಶ್ವರಿ ಮೀನುಗಾರಿಕಾ ಸಂಘ ,ಕೃಷಿಪತ್ತಿನ ಸಹಾಕಾರ ಸಂಘದ ಅಧ್ಯಕ್ಷರುಗಳು ಹಾಗೂ ನಿರ್ದೇಶಕರುಗಳು ಶಾಲೆಯ ಮುಖ್ಯಾಪಧ್ಯಾಯರುಗಳು ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಪ್ರೌಢಶಾಲೆಯ ಮುಖ್ಯ ಶಿಕ್ಷಕರುಗಳು ಹಾಗೂ ಸಿಬ್ಬಂದಿವರ್ಗದವರು ಭಾಗಿಯಾಗಿದ್ದರು.



