Connect with us

Dvgsuddi Kannada | online news portal | Kannada news online

ಮೂರು ದಿನ ಭಾರೀ ಮಳೆ; ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

rain news 1

ಪ್ರಮುಖ ಸುದ್ದಿ

ಮೂರು ದಿನ ಭಾರೀ ಮಳೆ; ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಚಂಡಮಾರುತ ಪರಿಣಾಮ‌ ಕರ್ನಾಟಕ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ (rain) ಅಬ್ಬರ ಹೆಚ್ಚಾಗಿದೆ. ಇಂದಿನಿಂದ ಮೂರು ದಿನ (ಮೇ 23 ವರೆಗೆ) ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಡಗು, ಮಿಂಚು ಸಹಿತ ಕರಾವಳಿ ಭಾಗದಲ್ಲಿ ಈಗಾಗಲೇ ಮಳೆ ಹೆಚ್ಚಾಗಿದೆ. ಜೂನ್ ತಿಂಗಳ ಮುಂಗಾರು ಪೂರ್ವದಲ್ಲಿಯೇ ಮಳೆ ಅಬ್ಬರ ಜೋರಾಗಿದೆ. ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಯಾವ ಜಿಲ್ಲೆಯಲ್ಲಿ ರೆಡ್ ಅಲರ್ಟ್

ಮುಂದಿನ ಎರಡು ದಿನಗಳ ಕಾಲ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಸೇರಿ ಒಟ್ಟು ಆರು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಈ ಸಂಬಂಧ ಐಎಂಡಿ ರೆಡ್ ಅಲರ್ಟ್ ನೀಡಲಾಗಿದೆ. ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಾಗಲಿದ್ದು, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಮಲೆನಾಡು ಭಾಗದಲ್ಲಿ ಎಚ್ಚರಿಕೆ

ಬಾಗಲಕೋಟೆ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. 20 ಅಧಿಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೊಡಗು, ಮಡಿಕೇರಿ ಸೇರಿದಂತೆ ಮಲೆನಾಡು ಭಾಗದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 22 ಮೇ 2025

    By

    ಈ ರಾಶಿಯವರ ಆಸ್ತಿ ವಿಭಜನೆಗೆ ಒಡಹುಟ್ಟಿದವರಿಂದ ಸಂಪೂರ್ಣ ಬೆಂಬಲ, ಈ ಮೂರು ರಾಶಿಗೆ ಒಡಹುಟ್ಟಿದವರಿಂದ ಪ್ರೇಮಿಗಳ ಮದುವೆಗೆ ಸಂಪೂರ್ಣ ಬೆಂಬಲ, ಗುರುವಾರದ...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಬುಧವಾರದ ರಾಶಿ ಭವಿಷ್ಯ 21 ಮೇ 2025

    By

    ಈ ರಾಶಿಯವರು ಉದ್ಯೋಗಕ್ಕೆ ಮರು ಸೇರ್ಪಡೆ, ಈ ರಾಶಿಯ ದಂಪತಿ ಪುನರ್ಮಿಲನ, ಬುಧವಾರದ ರಾಶಿ ಭವಿಷ್ಯ 21 ಮೇ 2025 ಸೂರ್ಯೋದಯ...

  • vidhana soudha bengaluru vidhana soudha bengaluru

    ರಾಜ್ಯ ಸುದ್ದಿ

    ಪದವಿ ವಿದ್ಯಾರ್ಥಿಗಳಿಗೆ ಶಾಕ್ ; ಎಲ್ಲ ಪದವಿ ಕೋರ್ಸ್ ಗಳ ಶುಲ್ಕ ಹೆಚ್ಚಳ

    By

    ಬೆಂಗಳೂರು: ಸರ್ಕಾರ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ಕಾಲೇಜು ಶಿಕ್ಷಣ ಇಲಾಖೆಯು ಸರಕಾರಿ ಮತ್ತು ಅನುದಾನಿತ ಕಾಲೇಜುಗಳ ಶುಲ್ಕವನ್ನು ಶೇ.5 ಹೆಚ್ಚಳ ಮಾಡಿ...

  • astrology today astrology today

    ಪ್ರಮುಖ ಸುದ್ದಿ

    ಮಂಗಳವಾರದ ರಾಶಿ ಭವಿಷ್ಯ 20 ಮೇ 2025

    By

    ಈ ರಾಶಿಯ ಪಾಲುಗಾರಿಕೆ ವ್ಯವಹಾರಗಳಲ್ಲಿ ಭಾರಿ ನಷ್ಟ, ಈ ರಾಶಿಯ ಆಸ್ತಿ ಮಾರಾಟದಲ್ಲಿ ಅಡೆತಡೆ ಮತ್ತು ವಿಳಂಬ, ಮಂಗಳವಾರದ ರಾಶಿ ಭವಿಷ್ಯ...

To Top