ಅಹಮದಾಬಾದ್: ಎರಡು ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು.
ಬೆಳಗ್ಗೆ 11.36ಕ್ಕೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ, ಪುತ್ರಿ ಪುತ್ರಿ ಇವಾಂಕ ಟ್ರಂಪ್ ಅವರನ್ನು ಸ್ವಾಗತಿಸಿದರು.

ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ನಂತರ ಮೋದಿ ಅಧಿಕಾರಿ ವರ್ಗದ ಸದಸ್ಯರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಟ್ರಂಪ್ ಅವರಿಗೆ ಪರಿಚಯಿಸಿದರು. ನಡೆದುಕೊಂಡು ಬರುತ್ತಿದ್ದಂತೆ ಸೇನೆಯಿದ ಟ್ರಂಪ್ ಅವರಿಗೆ ಗೌರವ ವಂದನೆ ನೀಡಲಾಯಿತು. ಗುಜರಾತಿನ ಸಾಂಸ್ಕತಿಕ ಕಲಾ ತಂಡದ ಸದಸ್ಯರು ನೃತ್ಯದ ಪ್ರದರ್ಶಿಸಿ ಟ್ರಂಪ್ ಅವರನ್ನು ಸ್ವಾಗತಿಸಿದರು.
#WATCH live via ANI FB: US President Donald Trump, First Lady Melania Trump and PM Modi enroute Motera Stadium in Ahmedabad. https://t.co/3mo97GEPcV pic.twitter.com/O9MUanATMR
— ANI (@ANI) February 24, 2020
#WATCH US President Donald Trump and First Lady Melania Trump arrive at Sabarmati Ashram. They were received by PM Narendra Modi. #TrumpInIndia pic.twitter.com/pXasQxrrG0
— ANI (@ANI) February 24, 2020



