ದಾವಣಗೆರೆ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಕ್ರಂ ಬಾಷ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 4 ಚಿನ್ನದ ಪದಕ ಪಡೆದಿದ್ದು, ಜಿಲ್ಲಾ ಪೊಲೀಸ್ ವತಿಯಿಂದ ಎಸ್ಪಿ ಉಮಾ ಪ್ರಶಾಂತ್ ಅಭಿನಂದನೆ ಸಲ್ಲಿಸಿದ್ದಾರೆ.
ಕೇರಳ ರಾಜ್ಯದ ಎರ್ನಾಕುಲಂ ನಲ್ಲಿ ಮೇ 3, 4ರಂದು ನಡೆದ ನಾಲ್ಕನೇ PAN India Masters Games ನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಘಟಕದಲ್ಲಿ ಎ.ಆರ್.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಕ್ರಂ ಬಾಷ Asian Masters Power Lifting ನಕ್ಲಿ 50 ವರ್ಷ ವಿಭಾಗದಲ್ಲಿ ಭಾಗವಹಿಸಿ 04 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.
ಯಾವ ವಿಭಾಗದಲ್ಲಿ ಪದಕ
- ಸ್ಕ್ವಾಟ್ ವಿಭಾಗದಲ್ಲಿ 180 ಕೆಜಿ ಭಾರ ಎತ್ತುವ ಮೂಲಕ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಬಾಜನ
- ಬೆಂಚ್ ಪ್ರೆಸ್ಸಿಂಗ್ ವಿಭಾಗದಲ್ಲಿ 102.5 ಕೆಜಿ ಭಾರ ಎತ್ತುವ ಮೂಲಕ ಮೊದಲ ಸ್ಥಾನ ಪಡೆದು ಚಿನ್ನದ ಪದಕ
- ಡೆಡ್ ಲಿಪ್ಟ್ ವಿಭಾಗದಲ್ಲಿ 215 ಕೆ ಭಾರ ಎತ್ತುಚ ಮೂಲಕ ಮೊದಲ ಸ್ಥಾನ ಪಡೆದು ಚಿನ್ನ
- ಎಲ್ಲಾ ವಿಭಾಗಗಳಲ್ಲಿ ಉತ್ತಮ ಸ್ಪರ್ದೆ Overall ಒಂದು ಚಿನ್ನದ ಪದಕ
ಕೇರಳ ರಾಜ್ಯದ ಎರ್ನಾಕುಲಂ ನಲ್ಲಿ ಮೇ 3 & 4 ರಂದು ನಡೆದ ನಾಲ್ಕನೇ PAN India MAsters Games ನಲ್ಲಿರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಘಟಕದಲ್ಲಿ ಎ.ಆರ್.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಕ್ರಂ ಬಾಷ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ವೈಯುಕ್ತಿಕವಾಗಿ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಿಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಶುಭಕೋರಿಧದಾರೆ. ಈ ಸಮಯದಲ್ಲಿ ಡಿಎಆರ್ ಡಿವೈಎಸ್ಪಿ ಪಿ ಬಿ ಪ್ರಕಾಶ್ ರಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



