Connect with us

Dvgsuddi Kannada | online news portal | Kannada news online

ದಾವಣಗೆರೆ: ತಿಂಗಳ ಕೊನೆಯಲ್ಲಿ ಮತ್ತಷ್ಟು ಅಡಿಕೆ ದರ ಕುಸಿತ; ಏ‌.28ರ ಕನಿಷ್ಠ,‌ ಗರಿಷ್ಠ ರೇಟ್ ಎಷ್ಟಿದೆ..?

arecanut rate today

ಪ್ರಮುಖ ಸುದ್ದಿ

ದಾವಣಗೆರೆ: ತಿಂಗಳ ಕೊನೆಯಲ್ಲಿ ಮತ್ತಷ್ಟು ಅಡಿಕೆ ದರ ಕುಸಿತ; ಏ‌.28ರ ಕನಿಷ್ಠ,‌ ಗರಿಷ್ಠ ರೇಟ್ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ತಿಂಗಳ ಕೊನೆಯಲ್ಲಿ ಮತ್ತೆ ಇಳಿಕೆ ಕಂಡಿದೆ. ಏ.23 ರಂದು ಗರಿಷ್ಠ 60,669 ರೂ. ಇದ್ದ ಬೆಲೆ ಏಕಾಏಕಿ 3 ಸಾವಿರ ಕುಸಿತ ಕಂಡಿದೆ‌. ಇಂದು (ಏ.28) ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್ ಗೆ 58,600ರೂ.ಗೆ ಕುಸಿದಿದೆ.

ಏ.28 ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)

  • ಗರಿಷ್ಠ ಬೆಲೆ 58,600
  • ಕನಿಷ್ಠ ಬೆಲೆ 53,689
  • ಸರಾಸರಿ ಬೆಲೆ 56,399

ಬೆಟ್ಟೆ ಅಡಿಕೆ ದರ

  • ಗರಿಷ್ಠ ಬೆಲೆ 31,100
  • ಕನಿಷ್ಠ ಬೆಲೆ 30,269
  • ಸರಾಸರಿ ಬೆಲೆ 30,823

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಏ.28ರಂದು ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 58,600 ಇದ್ದು, ಕನಿಷ್ಠ ಬೆಲೆ 53,689 ರೂ., ಸರಾಸರಿ ಬೆಲೆ 56,399 ರೂ.‌ಇದೆ.

ಹೆಚ್ಚಿದ ಬಿಸಿಲಿನ ತಾಪಮಾನ

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಳದಿಂದ ಅಡಿಕೆಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ.‌ ಹೀಗಾಗಿ ಅಡಿಕೆ ತೋಟಗಳ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ.

ಕಳೆದ ಎರಡು ವರ್ಷಗಳ ಗರಿಷ್ಠ‌ ಬೆಲೆ ಎಷ್ಟು‌‌..?

ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿ ದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಏಪ್ರಿಲ್ ತಿಂಗಳಲ್ಲಿ 23ರಂದು ಗರಿಷ್ಠ ಬೆಲೆ 60,669 ರೂ. ಇತ್ತು. ತಿಂಗಳ ಕೊನೆಯಲ್ಲಿ 59 ಸಾವಿರ ಒಳ್ಎ ಬಂದಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಭಾನುವಾರದ ರಾಶಿ ಭವಿಷ್ಯ 01 ಜೂನ್ 2025

    By

    ಈ ರಾಶಿಯವರಿಗೆ ವಿದೇಶ ಯೋಗ, ಈ ರಾಶಿಯವರಿಗೆ ಮದುವೆ ಯೋಗ, ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಭಾನುವಾರದ ರಾಶಿ ಭವಿಷ್ಯ 01...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 31 ಮೇ 2025

    By

    ಈ ರಾಶಿಯ ಕಲಾವಿದರಿಗೆ ಶುಭ ಸಂದೇಶ, ಈ ರಾಶಿಯವರಿಗೆ ಎಲ್ಲಾ ಇದ್ದು ಏನೂ ಕೈಗೂಡುತ್ತಿಲ್ಲ, ಶನಿವಾರದ ರಾಶಿ ಭವಿಷ್ಯ 31 ಮೇ...

  • astrology today astrology today

    ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 30 ಮೇ 2025

    By

    ಈ ರಾಶಿಯವರ ವ್ಯಾಪಾರಕ್ಕೆ ಗ್ರಾಹಕರ ಕೊರತೆ, ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ , ಶುಕ್ರವಾರದ ರಾಶಿ ಭವಿಷ್ಯ...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 29 ಮೇ 2025

    By

    ಈ ರಾಶಿಯವರಿಗೆ ಬಂಪರ್, ಈ ರಾಶಿಯವರಿಗೆ ಮದುವೆ ಯೋಗ, ಈ ರಾಶಿ ದಂಪತಿಗಳಿಗೆ ಸಂತಾನ ಭಾಗ್ಯ, ಗುರುವಾರದ ರಾಶಿ ಭವಿಷ್ಯ 29...

To Top