ಅಕ್ರಮ ಸೈಟ್, ಮನೆಗಳಿಗೆ ಬಿ ಖಾತೆ: ಕೇವಲ ತೆರಿಗೆ ಸಂಗ್ರಹಕ್ಕೆ ಮಾತ್ರ ಹೊಸ ಮಾರ್ಗ ಸೃಷ್ಠಿನಾ..?; ಬಿ ಖಾತೆ ಅಧಿಕೃತವಲ್ಲವೇ..?- ಈ ಬಗ್ಗೆ ವಿಪಕ್ಷಗಳ ಮನವಿ ಏನು..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಸರ್ಕಾರ ರಾಜ್ಯದ ಸ್ಥಳೀಯ ಸಂಸ್ಥೆಗಳ ಅಕ್ರಮ ನಿವೇಶನ, ಕಟ್ಟಡಗಳಿಗೆ‌ ಬಿ ಖಾತೆ ಅಭಿಯಾನ ಆರಂಭಿಸಿದೆ. ಆದರೆ,‌ಇದರಲ್ಲಿ ಸಾಕಷ್ಟು ದೋಷಗಳಿವೆ. ಅಕ್ರಮ ಸೈಟ್, ಮನೆಗಳಿಗೆ ಬಿ ಖಾತೆ ನೀವುದು ಕೇವಲ ತೆರಿಗೆ ಸಂಗ್ರಹಕ್ಕೆ ಮಾತ್ರ ಹೊಸ ಮಾರ್ಗ ಸೃಷ್ಠಿಯಂತಿದೆ. ಬಿ ಖಾತೆಗಳಲ್ಲಿ ಅನಧಿಕೃತ ಎಂಬ ಕಾಲಂ ತೆಗೆದಿಲ್ಲ ಎಂದು ವಿಪಕ್ಷ ಆರೋಪಿಸಿದೆ. ನಮೂನೆ -2 ರಲ್ಲಿ ಅಧಿಕೃತವೆಂದು ನಮೂದಿಸಿ, ಸಕ್ರಮಗೊಳಿಸಿ ಬ್ಯಾಂಕ್ ಸಾಲ ಸಿಗುವಂತೆ ಅವಕಾಶ ಮಾಡಿಕೊಡಲು ಪರಿಷ್ಕೃತ ಆದೇಶ ಹೊರಡಿಸುವಂತೆ ವಿಧಾನ ಪರಿಷತ್ತು ಮುಖ್ಯ ಸಚೇತಕ ಎನ್.ರವಿಕುಮಾರ ನೇತೃತ್ವದಲ್ಲಿ ದಾವಣಗೆರೆ ಪಾಲಿಕೆ ಮಾಜಿ ವಿಪಕ್ಷ ನಾಯಕ, ಮಾಜಿ ಮೇಯರ್, ಸದಸ್ಯರ ನಿಯೋಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಗೆ ಮನವಿ ಸಲ್ಲಿಸಿದರು.

ದಾವಣಗೆರೆ: ಅನಧಿಕೃತ ಬಡಾವಣೆಯ ಸೈಟ್, ಮನೆ, ಕಟ್ಟಡಗಳಿಗೆ ಡೋರ್ ನಂಬರ್ ನೀಡಲು ಪಾಲಿಕೆ ಪಡೆಯುತ್ತಿದ್ದ 10 ಸಾವಿರ ಹೆಚ್ಚುವರಿ ಶುಲ್ಕ ರದ್ದು

ಬೆಂಗಳೂರಿನಲ್ಲಿ ಪಾಲಿಕೆ ಮಾಜಿ ಮೇಯರ್ ಎಸ್.ಟಿ.ವೀರೇಶ, ಮಾಜಿ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಸದಸ್ಯ ಆರ್.ಶಿವಾನಂದ ಹಾಗೂ ಕೆ.ಎಂ.ವೀರೇಶ ಅವರನ್ನೊಳಗೊಂಡ ನಿಯೋಗ ಸಚಿವರನ್ನು ಭೇಟಿ ಮನವಿ ಸಲ್ಲಿಸಿದರು.

  • ಕಂದಾಯ ನಿವೇಶನಗಳನ್ನು ನಮೂನೆ-2ರಲ್ಲಿ ಅಧಿಕೃತವೆಂದು ನಮೂದಿಸಿ, ಸಕ್ರಮಗೊಳಿಸಬೇಕು
  • ಈ ಬಗ್ಗೆ ಪರಿಷ್ಕೃತ ಆದೇಶ ಹೊರಡಿಸಬೇಕು
  • ಬ್ಯಾಂಕ್ ಸಾಲ ಸಿಗುವಂತೆ ಅವಕಾಶ ಮಾಡಿಕೊಡಬೇಕು
  • ಅಧಿಕೃತ ಆಸ್ತಿಯೆಂದು ಇ-ಖಾತಾ ನೀಡಲು ಕ್ರಮ ಕೈಗೊಳ್ಳಿ

ದಾವಣಗೆರೆ: ಮಾಸಾಶನ ಪಡೆಯುತ್ತಿರುವ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಮಾತ್ರ ಬಿ ಖಾತೆ ನೀಡಿದಂತಿದೆ; ಸರ್ಕಾರದ ಆದೇಶದಲ್ಲಿ ಬಡವರಿಗೆ ನೆರವಾಗುವ ಬದಲಿಗೆ, ಕಂದಾಯ ನಿವೇಶನಗಳನ್ನು ಅನಧಿಕೃತ ಆಸ್ತಿಗಳೆಂದು ಪ್ರತ್ಯೇಕ ಬಿ ರಿಜಿಸ್ಟರ್‌ನಲ್ಲಿ ನಮೂದಿಸಿ, ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಮಾತ್ರ ತಿದ್ದುಪಡಿ ತಂದಿದ್ದು, ಅಧಿಕೃತ ಆಸ್ತಿಯೆಂದು ಇ-ಖಾತಾ ನೀಡಿ, ಆಸ್ತಿ ಸಕ್ರಮಗೊಳಿಸದೇ ಇರುವುದು ಸರಿಯಲ್ಲ. ತಕ್ಷಣವೇ ಸರ್ಕಾರ ನಮೂನೆ-2 ಎ ಮತ್ತು ನಮೂನೆ-3 ಎ ನಲ್ಲಿ ಆಸ್ತಿ ವರ್ಗೀಕರಣ ಕಾಲಂನಲ್ಲಿ ಅಧಿಕೃತವೆಂದೇ ನಮೂದಿಸಬೇಕು. ನಿವೇಶನಗಳಿಗೆ ಕಟ್ಟಡ ಪರವಾನಿಗೆ ನೀಡಲು ಅಗತ್ಯ ತಿದ್ದುಪಡಿ ತರಬೇಕು. ಮನೆ ಕಟ್ಟಿಕೊಳ್ಳಲು ಕಂದಾಯ ನಿವೇಶನಗಳನ್ನು ಅಧಿಕೃತವೆಂದು ಘೋಷಿಸಿ, ಬ್ಯಾಂಕ್ ಸಾಲ ನೀಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತೆರಿಗೆ ಪಾವತಿಸಿದರೂ ಕಟ್ಟಡ ಪರವಾನಗಿ ಸಿಗುತ್ತಿಲ್ಲ: ಈಗ ದುಪ್ಪಟ್ಟು ತೆರಿಗೆ ಪಾವತಿಸಿ, ಬಿ ಖಾತಾ ನಮೂನೆ-2 ಎ ಅಥವಾ ನಮೂನೆ-3 ಎ ಪಡೆದ ಕಂದಾಯ ನಿವೇಶನದಾರರಿಗೆ ಕಟ್ಟಡ ಪರವಾನಗಿ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ. ಬಡ, ಮಧ್ಯಮ ವರ್ಗದ ಜನರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರ ನಮ್ಮ ಮನವಿ ಗಂಭೀರವಾಗಿ ಪರಿಗಣಿಸಿ ಪರಿಷ್ಕರಿಸಬೇಕು ಎಂದು ಮನವಿ ಸಲ್ಲಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *