ದಾವಣಗೆರೆ: ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, ಒಟ್ಟು 2, 50,000/- ರೂ ಮೌಲ್ಯದ 10 ಬೈಜ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ: ಜಿಲ್ಲಾ ವಿಪತ್ತುನಿರ್ವಹಣಾ ಪ್ರಾಧಿಕಾರದಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಮಂಜುನಾಥ್ ಹೆಚ್ ( 33) ತಮ್ಮ ಹಿರೋ ಸ್ಟೈಂಡರ್ ಪ್ಲಸ್ ಬೈಕನ್ನು ದಿನಾಂಕ: 10-12-2024 ರಂದು ರಾತ್ರಿ 10-30 ಗಂಟೆಗೆ ಸಿ.ಜಿ. ಆಸ್ಪತ್ರೆ ಆವರಣದ ತುರ್ತು ಚಿಕಿತ್ಸಾ ಘಟಕದ ಹತ್ತಿರ ನಿಲ್ಲಿಸಿದ್ದರು. ನಂತರ ಬೆಳಿಗ್ಗೆ 6.00 ಗಂಟೆಗೆ ಹೋಗಿ ನೋಡಿದಾಗ ಬೈಕ್ ನಿಲ್ಲಿಸಿದ್ದ ಜಾಗದಲ್ಲಿ ಇಲ್ಲದಿದ್ದಾಗ ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.
ದಾವಣಗೆರೆ: ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರಿಗೆ ಉದ್ಯೋಗಾವಕಾಶ
ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿ ಪತ್ತೆಗಾಗಿ ಎಎಸ್ಪಿಗಳಾದ ವಿಜಯ ಕುಮಾರ್ ಎಂ ಸಂತೋಷ, ಜಿ ಮಂಜುನಾಥ ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್ ಮಾರ್ಗದರ್ಶನದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ತಂಡವು ದಿನಾಂಕ:05-03-2025 ರಂದು ಮಧ್ಯಾಹ್ನ ರೈಲ್ವೇ ಸ್ಟೇಷನ್ ಬಳಿ ಗಸ್ತಿನಲ್ಲಿರುವಾಗ ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಪತ್ತೆಯಾಗಿದೆ.
ಆರೋಪಿಗಳ ಸುಳಿವು ಆಧರಿಸಿ ಆರೋಪಿ ಎ-1 ಗಂಗರಾಜು ಎಂ @ ಎಮ್ಮೆ ಗಂಗ (27), ಗಾರೆ ಕೆಲಸ ವಾಸ: ಸೂಲದಹಳ್ಳಿ ಗ್ರಾಮ ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆ. ಎ-2 ಒಮೇಶ್ ಕೆ.ಪಿ (36), ತರಗಾರ ಕೆಲಸ ವಾಸ: ಖಾನಹೊಸಹಳ್ಳಿ ಗ್ರಾಮ ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆ. ಇವರುಗಳನ್ನು ಬಂಧಿಸಿ ಕಳ್ಳತನ ಮಾಡಿದ್ದ 2.50.000 ರೂ. ಮೌಲ್ಯದ ಒಟ್ಟು 10 ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಆರೋಪಿತರ ಹಿನ್ನೆಲೆ : ಆರೋಪಿತರು ಕಳ್ಳತನ ಮಾಡಿದ 10 ಬೈಕುಗಳು ಹೀರೋ ಹೊಂಡಾ ಸೈಂಡರ್ ಪ್ಲಸ್ ಬೈಕುಗಳಾಗಿರುತ್ತವೆ ಎ-1 ಆರೋಪಿತನ ವಿರುದ್ಧ ವಿಜಯನಗರ ಜಿಲ್ಲೆ ಕೊಟ್ಟೂರು ಠಾಣೆಯಲ್ಲಿ ಬೈಕ್ ಕಳ್ಳತನದ ಕೇಸ್ ಇರುತ್ತದೆ.
ದಾವಣಗೆರೆ: ಮಾ.10 ಅಡಿಕೆ ಧಾರಣೆ; ಮತ್ತೆ ಏರಿದ ಅಡಿಕೆ ದರ- ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಬೈಕ್ ಕಳ್ಳರನ್ನು ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವ ಕಾರ್ಯಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಆರ್ ಚೌಬೆ, ಪಿಎಸ್‌ಐನಾಗರಾಜ್ ಬಿ.ಆರ್. ಲತಾ ವಿ ತಾಳೇಕರ್, ಅನ್ನಪೂರ್ಣಮ್ಮ, ಜಿ.ಎಲ್, ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಧ್ರುವ, ಬಸವರಾಜ ಡಿ, ಬಸವರಾಜ, ರಾಮಾಂಜನೇಯ ಕೊಂಡಿ ಮತ್ತು ಜಿಲ್ಲಾ ಪೊಲೀಸ್ ಕಛೇರಿ ಸಿಬ್ಬಂದಿ ಶಿವಕುಮಾರ್ , ರಾಮಚಂದ್ರ ಬಿ ಜಾಧವ್ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



