ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ ದಾವಣಗೆರೆ ಜಿಲ್ಲೆ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ‘ಡ್ರಗ್ಸ್ ಮುಕ್ತ ದಾವಣಗೆರೆ’ ‘ಸೈಬರ್ ಸೇಫ್ ಸಿಟಿ’ ‘112 ಸಹಾಯವಾಣಿ’ ‘ಸಂಚಾರ ನಿಯಮಗಳ ಕಡ್ಡಾಯ ಪಾಲನೆ’, ‘ಫಿಟ್ ನೆಸ್ ಫಾರ್ ಆಲ್’. ‘ಮಹಿಳಾ ಸುರಕ್ಷತೆ’ ಅಭಿಯಾನ ಎಂಬ ಘೋಷಣೆ ಅಡಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಮಾ.9 ರಂದು ದಾವಣಗೆರೆ ನಗರದಲ್ಲಿ 2 ನೇ ಬಾರಿಗೆಪೊಲೀಸರೊಂದಿಗೆ “10ಕೆ ಮೆರಾಥಾನ್ ಹಾಗೂ 5ಕೆ ಮೆರಾಥಾನ್ ಓಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಾವಣಗೆರೆ: ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್ ; ಮನೆ, ಫಾರಂಹೌಸ್ ಸೇರಿ ಐದು ಕಡೆ ದಾಳಿ-ಅಪಾರ ಪ್ರಮಾಣದ ಸಂಪತ್ತು ವಶ
ಈ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಪೊಲೀಸರೊಂದಿಗೆ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಯುವಕ/ಯುವತಿಯರು, ಕ್ರೀಡಾಪಟುಗಳು(ಪುರುಷ & ಮಹಿಳೆ) ಹಾಗೂ ಜಿಲ್ಲೆಯ ನಾಗರೀಕರು ಸಹ ಸ್ವ-ಹಿತಾಸಕ್ತಿಯಿಂದ ಪಾಲ್ಗೋಳಲು ಅವಕಾಶವಿರುತ್ತದೆ. ಸದರಿ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಇಲ್ಲಿ ನೀಡಲಾಗಿರುವ ಲಿಂಕ್/ಕ್ಯೂಆರ್ ಕೋಡ್ ಲಿಂಕ್ ಅನ್ನು ಬಳಸಿ ದಿನಾಂಕ: 08-03-2025 ರಂದು ಮದ್ಯಾಹ್ನ 02-00 ಗಂಟೆಯೊಳಗೆ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಅಡಿಕೆಯ ಎಲೆ ಚುಕ್ಕೆ, ಹಳದಿ ಎಲೆ ರೋಗಕ್ಕೆ ಶೀಘ್ರ ಪರಿಹಾರ; ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
Link: https://forms.gle/hU3nccXQ7gMmMVeF7 ದಾವಣಗೆರೆ ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ದಿನಾಂಕ: 09-03-2025 ರಂದು ಬೆಳಗ್ಗೆ 07-00 ಗಂಟೆಗೆ “10ಕೆ ಮೆರಾಥಾನ್ ಹಾಗೂ 5ಕೆ ಮೆರಾಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆ” ಗೆ ಚಾಲನೆ ನೀಡಲಾಗುವುದು.
ವಿಜೇತರಿಗೆ ಬಹುಮಾನ:10000 ಮೀ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ ಮೂವರು ಸ್ಪರ್ದೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ.ಮೊದಲ ಬಹುಮಾನ 20,000/- ರೂ.ಎರಡನೇ ಬಹುಮಾನ 10000/- ರೂ. ಮೂರನೇ ಬಹುಮಾನ 5000/- ರೂ.
5000 ಮೀ ಮೆರಾಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ* ಮೊದಲ 03 ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ 10,000/- ರೂಗಳು, ಎರಡನೇ ಬಹುಮಾನ 5000/- ರೂಗಳು, 03 ಮೂರನೇ ಬಹುಮಾನ 3000/- ರೂಗಳು ಆಗಿರುತ್ತದೆ.
ವಿಶೇಷವಾಗಿ ಮಹಿಳೆಯರಿಗಾಗಿ 5000 ಮೀ ಮೆರಾಥಾನ್ ಓಟದ ಸ್ಪರ್ಧೆನ್ನು ಆಯೋಜಿಸಿದ್ದು, ವಿಜೇತರಾದ ಮೊದಲ 03 ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಂದರೆ- ಮೊದಲ ಬಹುಮಾನ 10,000/- ರೂಗಳು, ಎರಡನೇ ಬಹುಮಾನ 5000/- ರೂಗಳು, 03 ಮೂರನೇ ಬಹುಮಾನ 3000/- ರೂಗಳು ಆಗಿರುತ್ತದೆ.
ಮೆರಾಥಾನ್ ಓಟದಲ್ಲಿ ಸ್ಪರ್ಧಿಸುವವರ ಗಮನಕ್ಕೆ: 10ಕೆ ಮ್ಯಾರಥಾನ್ ಹಾಗೂ 05ಕೆ ಮ್ಯಾರಥಾನ್ ಪೊಲೀಸರೊಂದಿಗೆ ಓಟ ಸ್ಪರ್ಧೆ ಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟ ವಯಸ್ಕರಾಗಿರಬೇಕು, ಯಾವುದೇ ಆರೋಗ್ಯದ ಸಮಸ್ಯೆಗಳು ಹೊಂದಿರಬಾರದು ಹಾಗೂ ಯಾವುದೇ ಸಮಸ್ಯೆ ಆದರೂ ಆರೋಗಯದಲ್ಲಿ ಏರುಪೇರು ಆದರೂ ಸ್ಪರ್ಧಾಳುಗಳೇ ಜವಾಬ್ದಾರರಾಗಿರುತ್ತಾರೆ.
ಮೆರಾಥಾನ್ ಓಟದ ಮಾರ್ಗ:10ಕೆ ಮೆರಾಥಾನ್ ಓಟದ ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ – ಡೆಂಟಲ್ ಕಾಲೇಜ್ ರಸ್ತೆ – ಗುಂಡಿ ವೃತ್ತ – ಶಾಮನೂರು ರಸ್ತೆ – ಲಕ್ಷ್ಮೀ ಪ್ಲೋರ್ ಮಿಲ್ ವೃತ್ತ ಮೂಲಕ ಬಾಪೂಜಿ ಬ್ಯಾಂಕ್ ಸಮುದಾಯ ವೃತ್ತ – ಶಾರದಾಂಭ ವೃತ್ತ ಮೂಲಕ ಸಾಗಿ ಕರ್ನಲ್ ರವೀಂದ್ರನಾಥ್ (ಕ್ಲಾಕ್ ಟವರ್ ವೃತ್ತ) ವೃತ್ತದ ಮೂಲಕ ನೇರವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಅಲ್ಲಿಂದ ಬಲ ತಿರುವು ಪಡೆದು ನೇರವಾಗಿ ಹಳೆ ಪಿಬಿ ರಸ್ತೆಯಲ್ಲಿ ಅರುಣ ವೃತ್ತ (ಚೆನ್ನಮ್ಮ ವೃತ್ತ) ಮೂಲಕ ಸಾಗಿ ಎಂ.ಜಿ ವೃತ್ತದಿಂದ ಬಲ ತಿರುವು ಪಡೆದುಕೊಂಡು ಜಯದೇವ ವೃತ್ತ ಮೂಲಕ ಸಾಗಿ ವಿದ್ಯಾರ್ಥಿ ಭವನ ಜಂಕ್ಷನ್ ಮೂಲಕ ಸಾಗಿ – ಬಾಪೂಜಿ ಬ್ಯಾಂಕ್ ಬಳಿ ಬಲ ತಿರುವ ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಬಾಪೂಜಿ ಆಸ್ಪತ್ರೆ ರಸ್ತೆಯ ಕ್ರೀಡಾಂಗಣದ ಮುಖ್ಯದ್ವಾರದ ಒಳಗಡೆ ಬರುವುದು.
5ಕೆ ಮೆರಾಥಾನ್ ಓಟದ ಮಾರ್ಗ: ಜಿಲ್ಲಾ ಕ್ರೀಡಾಂಗಣದಿAದ ಆರಂಭವಾಗಿ ಹದಡಿ ರಸ್ತೆಯ ಪೂರ್ವ ಮುಖ್ಯದ್ವಾರದ ಮೂಲಕ ಸಾಗಿ ಎ ಆರ್ ಜಿ ಕಾಲೇಜ್ ರಸ್ತೆ ಮೂಲಕ ಡೆಂಟಲ್ ಯುಬಿಡಿಟಿ ಕಾಲೇಜ್ ಬಳಿ ತಿರುವು ಪಡೆದು ಡೆಂಟಲ್ ಕಾಲೇಜ್ ರಸ್ತೆ ಮೂಖಾಂತರ ಮಡೆಕಲ್ ಹಾಸ್ಟೇಲ್ ರಸ್ತೆ ಮೂಲಕ ಸಾಗಿ ಆಂಜನೇಯ ಬಡಾವಣೆ ಚಕ್ ದೇ ಪಕ್ಕದ ರಸ್ತೆಯಲ್ಲಿ ಸಾಗಿ ಥೀಮ್ ಪಾರ್ಕ ಬಳಿ ರಸ್ತೆ ಮೂಖಾಂತರ ನೂತನ ಕಾಲೇಜು ರಸ್ತೆಗೆ ಸೇರಿ ವಿದ್ಯಾನಗರ ಕಾಫಿ ಡೇ ಬಳಿ ಬಲ ತಿರುವು ಪಡೆದು ವಿದ್ಯಾನಗರ 2 ನೇ ಬಸ್ ನಿಲ್ದಾಣ ಬಳಿ ಎಡ ತಿತುವು ಪಡೆದು ಹದಡಿ ರಸ್ತೆಗೆ ಬಂದು ನೇರವಾಗಿ ಹದಡಿ ರಸ್ತೆ ಮುಖಾಂತರ ಸ್ಟೇಡಿಯಂ ಬಳಿ ಬಂದು ಸೇರುವುದು.