ಡಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ನವರೇ ದುಡ್ಡು ಕೊಟ್ಟು ಮತದಾನಕ್ಕೆ ಬರಬೇಡ ಎಂದು ತಮ್ಮ ಪಕ್ಷದ ಸದಸ್ಯರಿಗೆ ಕಳುಹಿಸಿರಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ದಾವಣಗೆರೆ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಅಜಯ್ ಕುಮಾರ್ ಆಯ್ಕೆಯಾದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಯಾವ ಆಪರೇಷನ್ ಕಮಲ ಮಾಡಿಲ್ಲ. ಕಾಂಗ್ರೆಸ್ ನವರೇ ಅಜಯ್ ಕುಮಾರ್ ಮೇಯರ್ ಆಗಲಿ ಎಂದು, ತಮ್ಮ ಪಕ್ಷದ ಸದಸ್ಯರಿಗೆ ಅವರೇ ದುಡ್ಡು ಕೊಟ್ಟು ಕಳುಹಿಸಿರಬೇಕು. ಹೀಗಾಗಿ ಅವರು ಮತದಾನದಲ್ಲಿ ಭಾಗಿಯಾಗಿಲ್ಲ ಎಂದು ತಿರುಗೇಟು ನೀಡಿದರು. ಇದೊಂದು ಚರಿತ್ರೆಯಲ್ಲಿ ಬರೆದಂತಹ ದಿನ. ಮೇಯರ್ ಚುನಾವಣೆ ಅತ್ಯಂತ ಸರಳ, ಸುಲಭವಾಗಿ ಅಧಿಕಾರಿಗಳು ನಡೆಸಿಕೊಟ್ಟಿದ್ದಾರೆ ಎಂದರು.

ಬಿಜೆಪಿ ಆಪರೇಷನ್ ಕಮಲ ಮಾಡಿದ್ದು, ನಮ್ಮ ಪಕ್ಷದ ಸದಸ್ಯರನ್ನು ಕೋಟಿಗಟ್ಟಲೇ ಹಣಕೊಟ್ಟು ಖರೀದಿ ಮಾಡಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದರು. ಚುನಾವಣಾಧಿಕಾರಿಗಳು ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯರು, ಎಂಲ್ಸಿಗಳು ಮತದಾನ ಬಹಿಷ್ಕರಿಸಿದ್ದರು. ಕಾಂಗ್ರೆಸ್ ನ ಮೂರು ಸದಸ್ಯರು ಮತದಾನದಲ್ಲಿ ಭಾಗಿಯಾಗದ ಕಾರಣ ಬಿಜೆಪಿ ಗೆಲುವು ಸುಲಭವಾಯಿತು.



