ದಾವಣಗೆರೆ: ಅಂತರ ಜಿಲ್ಲೆಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 10,30,000 ರೂ. ಬೆಲೆಯ 123.5 ಗ್ರಾಂ ಚಿನ್ನ 59.72 ಗ್ರಾಂ ತೂಕದ ಬೆಳ್ಳಿ ಲೋಟ ಎರಡು ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ: ಮಾ.15 ರಂದು ಬೃಹತ್ ಉದ್ಯೋಗ ಮೇಳ; 40ಕ್ಕೂ ಹೆಚ್ಚು ಕಂಪನಿಗಳಿಂದ 3 ಸಾವಿರ ಹುದ್ದೆ ಭರ್ತಿ
ದೂರುದಾರ ಗೋಪಿ.ಪಿ.ಎನ್ ಹರಿಹರದ ತಮ್ಮ ಹೊಂಡಾ ಶೈನ್ ಬೈಕ್ ಕಳ್ಳತನ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆರೋಪಿಗಳ ಪತ್ತೆಗೆ ಎಎಸ್ಪಿ ವಿಜಯಕುಮಾರ ಕುಮಾರ್ ಎಂ ಸಂತೋಷ್ , ಜಿ ಮಂಜುನಾಥ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ ಎಸ್.ದೇವಾನಂದ ನೇತೃತ್ವದಲ್ಲಿ ಪಿ.ಎಸ್.ಐ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರವಿನಾಯ್ಕ್, ಶಾಂತರಾಜ್, ಸಿದ್ದರಾಜು, ರವಿ.ಕೆ, ಚಾಲಕ ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ ರವರನ್ನೊಳಗೊಂಡ : 02-03-2025 ರಂದು ಹರಿಹರ ನಗರದ ಎಂ.ಜಿ.ವೃತ್ತದಲ್ಲಿ ವಾಹನ ಚೆಕ್ ಮಾಡುವಾಗ ಆರೋಪಿಗಳಾದ ಪ್ರವೀಣ ಆನಂದಪ್ಪ ಹಡಗಲಿ (23)ವರ್ಷ, ವಾಸ: ರಾಣೆಬೆನ್ನೂರು, ಹಾವೇರಿ ಜಿಲ್ಲೆ, ಆಕಾಶ್ ಮುದೋಳಕರ (23) ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ: ರಾಣೆಬೆನ್ನೂರು ನಗರ. ಹಾಲಿವಾಸ: ಮಾಸೂರು, ರಟ್ಟಿಹಳ್ಳಿ ತಾಲೂಕ್, ಹಾವೇರಿ ಜಿಲ್ಲೆ ಇವರು ಕಳ್ಳತನ ಮಾಡಿದ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದಾಗ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 1ನೇ ಆರೋಪಿತನು ತಲೆಮರೆಸಿಕೊಂಡಿದ್ದು ಪತ್ತೆಯಾಗಬೇಕಿದೆ.
ವಶಪಡಿಸಿಕೊಂಡ ಸ್ವತ್ತು: ವಿದ್ಯಾನಗರ ಠಾಣೆಯಕ್ಲಿ 123.5 ಗ್ರಾಂ ಬಂಗಾರದ ಆಭರಣ 59.72 ಗ್ರಾಂ ತೂಕದ ಒಂದು ಬೆಳ್ಳಿ ಲೋಟ, ಕೃತ್ಯಕ್ಕೆ ಬಳಕೆ ಮಾಡಿದ ಹೈಡ್ರಾಲಿಕ್ ಕಟ್ಟರ್ ಮಿಷಿನ್,
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಮೋಟಾರ್ ಬೈಕ್, ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಹೊಂಡಾ ಶೈನ್ ಮೋಟಾರ್ ಬೈಕ್, ಆರೋಪಿತನಿಂದ ಒಟ್ಟು 10,30,000/-ರೂ ಬೆಲೆಯ 123.5 ಗ್ರಾಂ ಬಂಗಾರ 59.72 ಗ್ರಾಂ ತೂಕದ ಬೆಳ್ಳಿ ಲೋಟ ಎರಡು ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ 1ನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯಾಚರಣೆ ಮುಂದುವರೆದಿರುತ್ತದೆ.
ಆರೋಪಿತ ಹಿನ್ನೆಲೆ- ಶಿವಮೊಗ್ಗ ಜಿಲ್ಲೆ ವಿನೋಬನಗರ ಠಾಣೆಯಲ್ಲಿ -02, ತಿರ್ಥಹಳ್ಳಿಯಲ್ಲಿ -01 ಸರಗಳ್ಳತನ ಪ್ರಕರಣಗಳು
ಹುಬ್ಬಳ್ಳಿ- ದಾರವಾಡ- ಕೇಶವಪುರ ಠಾಣೆ-01 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ.ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರ ಪತ್ತೆಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.