ದಾವಣಗೆರೆ: ನಗರದ ವಿವಿಧ ಕಡೆ ಮಾರಾಟ ಮಾಡುತ್ತಿದ್ದ ಹಾಫ್ ಮತ್ತು ಕಳಪೆ ಹೆಲ್ಮೆಟ್ ಮಳಿಗಳ ಮೇಲೆ ಜಿಲ್ಲಾ ಪೊಲೀಸರು ದಾಳಿ ಮಾಡಿದ್ದು, 1,500 ಹೆಲ್ಮೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ: ಬೇಸಿಗೆಯಲ್ಲಿ ಫುಲ್ ಹೆಲ್ಮೆಟ್ ಗೆ ವಿನಾಯಿತಿ ನೀಡಿ; ದಿನೇಶ್ ಶೆಟ್ಟಿ ಜಿಲ್ಲಾ ಪೊಲೀಸ್ ಗೆ ಮನವಿ
ಎಸ್ಪಿ ಉಮಾ ಪ್ರಶಾಂತ್ ಸೂಚನೆಯಂತೆ ಎಎಸ್ಪಿ ವಿಜಯಕುಮಾರ ಎಂ ಸಂತೋಷ್ ಹಾಗೂ ಜಿ ಮಂಜುನಾಥ, ಡಿವೈಎಸ್ಪಿ ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ಸುರಕ್ಷಿತಾವಲ್ಲದ ಪ್ಲಾಸ್ಟಿಕ್ ಮತ್ತು ಹಾಫ್ ಹೆಲ್ಮೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆ ಗಳಿಗೆ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಸುಮಾರು 1500 ಪ್ಲಾಸ್ಟಿಕ್ / ಹಾಫ್ ಹೆಲ್ಮೆಟ್ ಗಳನ್ನು ವಶಕ್ಕೆ ಪಡಿಯಲಾಯಿತು.
ದಾವಣಗೆರೆ: ಗುತ್ತಿಗೆ ಪೌರ ಕಾರ್ಮಿಕರ ಪಿಎಫ್, ಇಎಸ್‌ಐ ದುರ್ಬಳಕೆಗೆ ಕಡಿವಾಣ
ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರ ಠಾಣೆ ಪಿಎಸ್ಐ, ಎ ಎಸ್ ಐ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಇನ್ಮುಂದೆ ಪ್ಲಾಸ್ಟಿಕ್ ಹಾಗೂ ಹಾಫ್ ಹೆಲ್ಮೆಟ್ ಮಾರಾಟ ಮಾಡಬಾರದು ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಸಿದ್ದಾರೆ.
ದಾವಣಗೆರೆ: ಆರೋಗ್ಯ ಇಲಾಖೆ ಯೋಜನೆ ಅರಿವು ಮೂಡಿಸಲು ಕಲಾ ತಂಡಗಳಿಂದ ಅರ್ಜಿ ಆಹ್ವಾನ



