ದಾವಣಗೆರೆ: ರಸ್ತೆ ಪಕ್ಕದ ಪಾಳು ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನ ತಾಲೂಕಿನ ಜಮ್ಮಾಪುರದಲ್ಲಿ ನಡೆದಿದೆ.
ಗ್ರಾಮದ ಕುಮಾರ್ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಪಕ್ಕದ ಪಾಳು ಬಾವಿಗೆ ಬಿದ್ದು, ಆವಿಯಿಂದ ಮೇಲೆ ಬರಲು ಸಾಧ್ಯವಾಗದೇ ನರಳುತ್ತಿದ್ದನು. ಈ ಬಗ್ಗೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಏಣಿಯ ಸಹಾಯದಿಂದ ಬಾವಿಗೆ ಇಳಿದು ವ್ಯಕ್ತಿ ರಕ್ಷಣೆ ಮಾಡಿದ್ದಾರೆ. ತೀವ್ರವಾಗೊ ಗಾಯಗೊಂಡಿದ್ದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗೇಶ್, ಸಿಬ್ಬಂದಿಗಳಾದ ಭೀಮರಾವ್, ಪ್ರೇಮಾನಂದ ಶೆಟ್ಟಿ, ಸುಭಾನ್, ಪ್ರದೀಪ್ ಕುಮಾರ್, ಪರಶುರಾಮ ಪೂಜಾರ, ಶಿವರಾಜ್ ಜಮಖಂಡಿ, ಗೋಪಾಲ್ ದಮಣೇಕರ, ಗಂಗಾ ನಾಯ್ಕ ಇದ್ದರು.



