ದಾವಣಗೆರೆ: ಈ ಬಾರಿಯ ಬೇಸಿಗೆಯಲ್ಲಿ ಬೈಕ್ ಸವಾರರಿಗೆ ಪೂರ್ಣ ಪ್ರಮಾಣದ ಹೆಲ್ಮೆಟ್ ಕಡ್ಡಾಯದಿಂದ ವಿನಾಯಿತಿ ನೀಡಿ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ( ಧೂಡಾ) ಅಧ್ಯಕ್ಷ ದಿನೇಶ್ ಶೆಟ್ಟಿ ಜಿಲ್ಲಾಪೊಲೀಸ್ ಇಲಾಖೆಗೆ ಮನವಿ ಮಾಡಿದರು.
ದಾವಣಗೆರೆ: ಇನ್ಮುಂದೆ ಐಎಸ್ ಐ ಮಾರ್ಕ್ ಹೆಲ್ಮೆಟ್ ಕಡ್ಡಾಯ ; 5 ಸಾವಿರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ವಶ
- ಸಭೆಯಲ್ಲಿ ಕೇಳಿಬಂದ ಪ್ರಮುಖ ಅಂಶ
- ಬೇಸಿಗೆಯಲ್ಲಿ ಬಳ್ಳಾರಿ, ರಾಯಚೂರು, ಗುಲ್ಬರ್ಗಾ,ಕೊಪ್ಪಳ ಜಿಲ್ಲೆಗಳಲ್ಲಿ ರಿಯಾಯಿತಿನೀಡಿದಂತೆ ನಮಗೂ ವಿನಾಯಿತಿ ನೀಡಿ
- ಕಳೆದ ಐದಾರು ವರ್ಷಗಳಿಂದ ಪೂರ್ಣ ಪ್ರಮಾಣದ ಹೆಲ್ಮೆಟ್ ಕಡ್ಡಾಯ ಮಾಡಿಲ್ಲ, ಈಗ ಏಕಾಏಕಿ ಮಾಡಿದ್ರೆ ಹೇಗೆ..?
- ನಗರದಲ್ಲಿ 40 ಕಿ.ಮಿಗಿಂತ ಹೆಚ್ಚು ವೇಗವಾಗಿ ಬೈಕ್ ಓಡಿಸಲು ಸಾಧ್ಯವಿಲ್ಲ, ಹೀಗಾಗಿ ಪೂರ್ಣ ಪ್ರಮಾಣದ ಹೆಲ್ಮೆಟ್ ಅಗತ್ಯವಿಲ್ಲ.
- ಪೊಲೀಸರು ಎಲ್ಲಾ ಕಡೆ ಇದೇ ರೀತಿ ಕಾನೂನುಗಳನ್ನು ಸರಿಯಾಗಿ ಪಾಲನೆ ಮಾಡ್ತಾರಾ..?
- ಅಧಿಕಾರಿಗಳು ಎರಡು ವರ್ಷಕ್ಕೆ ಬರುತ್ತಾರೆ, ಹೋಗುತ್ತಾರೆ, ಸಾರ್ವಜನಿಕರ ಸಮಸ್ಯೆ ಅರ್ಥ ಮಾಡಿಕೊಳ್ಳಿ
- ಪೂರ್ಣ ಪ್ರಮಾಣದ ಹೆಲ್ಮೆಟ್ ನಿಂದ ವಿನಾಯತಿ ನೀಡುವಂತೆ ಸಾರ್ವಜನಿಕ ನಿಯೋಗದೊಂದಿಗೆ ಎಸ್ಪಿಗೆ ಮನವಿ
ನಗರದ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಾಭಿಪ್ರಾಯ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಬೇಸಿಗೆಯಲ್ಲಿ ಪೂರತಣ ಪ್ರಮಾಣದ ಕಡ್ಡಾಯ ಹೆಲ್ಮೆಟ್ ಗೆ ವಿನಾಯತಿ ನೀಡಬೇಕು. ಈ ಬಗ್ಗೆ ಹೋರಾಟಕ್ಕೆ ಹೋಗಲು ಅವಕಾಶ ನೀಡಬೇಡಿ. ಕಳೆದ ಐದಾರು ವರ್ಷಗಳಿಂದ ಪೂರ್ಣ ಪ್ರಮಾಣದ ಹೆಲ್ಮೆಟ್ ಕಡ್ಡಾಯ ಮಾಡಿಲ್ಲ. ಹೀಗಾಗಿ ಈ ಬಾರಿ ಬೇಸಿಗೆ ರಿಯಾಯಿತಿ ಕೊಡಿ ಎಂದು ಜಿಲ್ಲಾ ಎಸ್ಪಿ ಅವರಿಗೆ ಮನವಿ ಸಲ್ಲಿಸಲಾಗಿವುದ ಎಂದರು.
ದಾವಣಗೆರೆ: ಎಸ್ಸೆಲ್ಸೆಲ್ಸಿ ಪರೀಕ್ಷೆ ಕಟ್ಟನಿಟ್ಟಾಗಿ ನಡೆಸಿ; ಪ್ರತಿ ಶಾಲೆಯಲ್ಲೂ ಸಿಸಿ ಕ್ಯಾಮಾರಾ- ಜಿಲ್ಲಾಧಿಕಾರಿ ಸೂಚನೆ
ಇತರೆ ಕಾನೂನುಗಳನ್ನು ಪೊಲೀಸರು ಸರಿಯಾಗಿ ಪಾಲನೆ ಮಾಡುತ್ತಿದ್ದಾರಾ? ದಾವಣಗೆರೆಯಲ್ಲಿ ಏನೆಲ್ಲ ನಡೆಯುತ್ತಿವೆ ಎಂಬುದು ಗೊತ್ತು. ಈ ಬಗ್ಗೆ ನಾವು ಶಾಂತವಾಗಿ ಕೇಳುತ್ತಿದ್ದೇವೆ. ನಮಗೂ ಎಲ್ಲ ಹೋರಾಟಗಳು ಗೊತ್ತಿದೆ. ಅಧಿಕಾರಿಗಳು ಎರಡು ವರ್ಷಕ್ಕೆ ಬರುತ್ತಾರೆ, ಹೋಗುತ್ತಾರೆ. ಆದರೆ ದಾವಣಗೆರೆಯಲ್ಲಿ ಇರುವುದು ನಾವು. ಮುಂದಿನ ಒಂದೆರಡು ದಿನಗಳಲ್ಲಿ
ಎಸ್ಪಿ ಅವರನ್ನು ಭೇಟಿ ಮಾಡಿ, ರಾಜ್ಯದ ಬಳ್ಳಾರಿ, ರಾಯಚೂರು, ಗುಲ್ಬರ್ಗಾ,ಕೊಪ್ಪಳ ಜಿಲ್ಲೆಗಳಲ್ಲಿ ಬೇಸಿಗೆ ದಿನಗಳಲ್ಲಿ ರಿಯಾಯಿತಿ ನೀಡಿರುವಂತೆ ನಮಗೂ ರಿಯಾಯತಿ ನೀಡಿಎಂದು ನಿಯೋಗದ ಮೂಲಕ ಮನವಿ ಮಾಡಲಾಗುವುದು ಎಂದರು.
ದಾವಣಗೆರೆ: ಗುತ್ತಿಗೆ ಪೌರ ಕಾರ್ಮಿಕರ ಪಿಎಫ್, ಇಎಸ್ಐ ದುರ್ಬಳಕೆಗೆ ಕಡಿವಾಣ
ತೆರಿಗೆ ಪಾವತಿದಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಮಾತನಾಡಿ, ನಗರ 40 ಕಿ.ಮಿಗಿಂತ ಹೆಚ್ಚು ವೇಗವಾಗಿ ಬೈಕ್ ಓಡಿಸಲು ಸಾಧ್ಯವಿಲ್ಲ .ಹಾಗಾಗಿ ಪೂರ್ಣ ಪ್ರಮಾಣದ ಹೆಲ್ಮೆಟ್ ಅಗತ್ಯವಿಲ್ಲ. ಆದರೂ ಪೊಲೀಸರು ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಇದೊಂದು ಮಾಫಿಯಾವಾಗಿದೆ. ನಾಲ್ಕು ದಿನಬಿಗಿ ಮಾಡಿ ನಿಯಮ ಸಡಿಲಿಸಿಬಿಡುತ್ತೀರಿ. ಈ ಡ್ರಾಮಾ ಬೇಡ ಎಂದರು. ಬೇಸಿಗೆ ಮುಗಿಯುವ ತನಕ ಪೂರ್ಣ ಪ್ರಮಾಣದ ಹೆಲೈಟ್ನಿಂದ ರಿಯಾಯತಿ ನೀಡುವಂತೆ ಮನವಿಸಲ್ಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಕರವೇ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ಜಿಲ್ಲಾ ಕರವೇ ಅಧ್ಯಕ್ಷ ರಾಮೇಗೌಡ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ , ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್, ಝಾಕೀರ್, ಅಯೂಬ್ ಪೈಲ್ವಾನ್, ಎಎಪಿ ಮುಖಂಡ ರಾಘವೇಂದ್ರ, ಮೈನುದ್ದೀನ್, ಕೊಟ್ರಯ್ಯ,ಸಂತೋಷ್, ಮಹಾಂತೇಶ್, ಮಂಗಳಮ್ಮ, ಮುರುಗೇಶ್, ಸೇರಿದಂತೆ
ಮತ್ತಿತರರು ಇದ್ದರು.