ದಾವಣಗೆರೆ: ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ (Maganur Basappa Foundation) ವತಿಯಿಂದ ಸರ್ಕಾರಿ ಕೋಟಾದಲ್ಲಿ (Government quota) ಪ್ರವೇಶ ಪಡೆದಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸಾಧು ಲಿಂಗಾಯತ (Sadhu Lingayat) ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರತಿಷ್ಠಾನದ ಆಯ್ಕೆ ಸಮಿತಿ ಸದಸ್ಯ ಡಾ. ಎಚ್.ವಿ. ವಾಮದೇವಪ್ಪ ಹೇಳಿದರು.
ದಾವಣಗೆರೆ: ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಧೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ನೇತೃತ್ವದಲ್ಲಿ ಸಮಾಲೋಚನೆ ಸಭೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯಾದ್ಯಂತ ಯಾವುದೇ ವೈದ್ಯಕೀಯ, ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆದಿರುವ, ಆರ್ಥಿಕವಾಗಿ ಹಿಂದುಳಿದಿರುವ ಸಾಧು ಲಿಂಗಾಯತ ಸಮಾಜದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿಯನ್ನು ವೆಬ್ಸೈಟ್: mbpt.org ನಿಂದ ಡೌನ್ಲೋಡ್ ಮಾಡಿಕೊಂಡು, ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು sharanamaganurbasappaprati@gmail.com ಇ-ಮೇಲ್ ಐ.ಡಿ. ಮೂಲಕವೂ ಅರ್ಜಿ ರವಾನಿಸಬಹುದು. ಅರ್ಜಿ ಸಲ್ಲಿಕೆಗೆ ಮಾರ್ಚ್ 15 ಕೊನೆ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 94811- 82711, 92424- 43909, 98448- 60466 ಇಲ್ಲಿಗೆ ಸಂಪರ್ಕಿಸಬಹುದು.
ಯಾವ ದಾಖಲೆ ಅಗತ್ಯ: ಪ್ರಥಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜಿನ ದಾಖಲಾತಿ ರಸೀದಿಗಳು ಮತ್ತು ನೀಟ್ ರ್ಯಾಂಕಿಂಗ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು. ಎರಡು, ಮೂರು ಮತ್ತು ನಾಲ್ಕನೇ ವರ್ಷದ ವೈದ್ಯಕೀಯ, ದಂತ ವೈದ್ಯಕೀಯ ವಿದ್ಯಾರ್ಥಿಗಳು ಹಿಂದಿನ ವರ್ಷದ ಅಂಕಪಟ್ಟಿ ಮತ್ತು ಪ್ರಸ್ತುತ ಸಾಲಿನ ಕಾಲೇಜಿನ ಶುಲ್ಕದ ರಶೀದಿಯ ಜೆರಾಕ್ಸ್ ಪ್ರತಿ ಒದಗಿಸಬೇಕು.
ವಿಳಾಸ: ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ, ನಂ.963, ಬಸವ ಸದನ ತರಳಬಾಳು ಬಡಾವಣೆ, ದಾವಣಗೆರೆ-577005 ಇಲ್ಲಿಗೆ ಸಂಪರ್ಕ ಮಾಡಬಹುದು ಎಂದರು. ಈ ಸಂದರ್ಭದಲ್ಲಿ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ.ಸಂಗಮೇಶ್ವರ ಗೌಡ, ಎಸ್.ಆರ್.ಶಿರಗುಂಬಿ, ಕುಸುಮಾ, ಲೋಹಿತ್ ಇದ್ದರು.