ದಾವಣಗೆರೆ: ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ವಿಶೇಷ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸ್, ಕರ್ಕಶ ಶಬ್ದದಿಂದ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುವ 90ಕ್ಕೂ ಹೆಚ್ಚು ಡಿಪೆಕ್ಟಿವ್ ಸೈಲೆನ್ಸರ್, ಹಾರ್ನ್, ಎಲ್ ಇಡಿ ಲೈಟ್ಸ್ ನಾಶಗಳನ್ನು ನಾಶ ಮಾಡಲಾಗಿದೆ.
ಎಸ್ಪಿ ಉಮಾ ಪ್ರಶಾಂತ್ ಸೂಚನೆಯಂತೆ ಎಎಸ್ಪಿಗಳಾದ ವಿಜಯಕುಮಾರ ಎಂ ಸಂತೋಷ , ಮಂಜುನಾಥ್ ಜಿ, ಡಿವೈಎಸ್ಪಿ ಬಸವರಾಜ್ ಬಿ ಎಸ್ ಮಾರ್ಗದರ್ಶನದಲ್ಲಿ ಹರಿಹರ ನಗರ ಪೊಲೀಸ್ ಠಾಣೆಯ ಪಿಐ ದಯಾನಂದ ನೇತೃತ್ವದಲ್ಲಿ ಪೊಲೀಸರ ತಂಡ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುವ 40 ಕ್ಕೂ ಹೆಚ್ಚು ಕರ್ಕಶ ಶಬ್ಧ ಮಾಡುವ ಡಿಪೆಕ್ಟಿವ್ ಸೈಲೆನ್ಸರ್ ಹಾಗೂ 30 ಕ್ಕೂ ಹೆಚ್ಚು Shrill Horns, 20 ಕ್ಕೂ ಹೆಚ್ಚು High Beam Led lights ವಶಪಡಿಸಿಕೊಂಡು ಈ ಸಂಬಂಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ದಂಡವನ್ನು ವಿಧಿಸಿರುತ್ತಾರೆ.
ಇಂದು ಹರಿಹರ ನಗರದಲ್ಲಿ ವಶಪಡಿಸಿಕೊಂಡ ಕರ್ಕಶ ದ್ವನಿ ಮಾಡುವ ಡಿಪೆಕ್ಟಿವ್ ಸೈಲೆನ್ಸರ್ ಗಳನ್ನು, Shrill Horns ಗಳನ್ನು, ಹಾಗೂ ರಾತ್ರಿ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗುವ High Beam Led lights ಗಳನ್ನು ಹರಿಹರ ನಗರದಲ್ಲಿ ನಾಶಪಡಿಸಲಾಯಿತು.
ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಡಿಪೆಕ್ಟಿವ್ ಸೈಲೆನ್ಸರ್ ಗಳನ್ನು, Shrill Horns ಗಳನ್ನು, High Beam Led lights ಗಳನ್ನು ವಾಹನಗಳಲ್ಲಿ ಬಳಸಬಾರದು ಎಂದು ಈ ಮೂಲಕ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಸಲಾಯಿತು.



