ದಾವಣಗೆರೆ: ಜಿಲ್ಲೆಯಲ್ಲಿನ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ (DR APJ ABDUL KALAM RESIDENTIAL SCHOOL) 6ನೇ ತರಗತಿ (ಸಿ.ಬಿ.ಎಸ್.ಸಿ ಪಠ್ಯಕ್ರಮ)ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ (morarji residential school) 6 ನೇ ತರಗತಿ (ರಾಜ್ಯ ಪಠ್ಯಕ್ರಮ)ದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75 ರಷ್ಟು ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಪ್ರವೇಶವಿರುತ್ತದೆ.
ಅರ್ಜಿಯನ್ನು ಮಾ.10 ರೊಳಗಾಗಿ ಸೇವಾ ಸಿಂಧು ಪೋರ್ಟಲ್ ವೆಬ್ ಸೈಟ್ https:// sevasindhuservices.karnataka.gov.in ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಾ|| ಎ.ಪಿ.ಜೆಅಬ್ದುಲ್ ಕಲಾಂ ವಸತಿ ಶಾಲೆ, ಕೊಂಡಜ್ಜಿ, ಹರಿಹರ.ತಾ. ಮೊ.ಸಂ: 9008815296, ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆ, ಕೆರೆಬಿಳಚಿ, ಚನ್ನಗಿರಿ.ತಾ. ಮೊ.ಸಂ: 483075634, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, ಹೊಸಕುಂದುವಾಡ, ಸಿಂಗ್ರಳ್ಳಿ ದೇವಿರಮ್ಮ ಬಡಾವಣೆ, ದಾವಣಗೆರೆ ಟೌನ್ ಮೊ.ಸಂ: 9916828601, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಡಚಗೊಂಡನಹಳ್ಳಿ ನ್ಯಾಮತಿ.ತಾ. ಮೊ.ಸಂ: 9164855466, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಜಗಳೂರು.ತಾ. ಮೊ.ಸಂ: 9916828601, ತಾಲ್ಲೂಕು ವಿಸ್ತಾರಣಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಉಪ ವಿಭಾಗ ಮೊ.ಸಂ: 08192-250066, ಜಿಲ್ಲಾ ಮಾಹಿತಿ ಕೇಂದ್ರ ದಾವಣಗೆರೆ ಮೊ.ಸಂ: 7019837748, ತಾಲ್ಲೂಕು ಮಾಹಿತಿ ಕೇಂದ್ರ ಹರಿಹರ ಮೊ.ಸಂ: 9845329483, ತಾಲ್ಲೂಕು ಮಾಹಿತಿ ಕೇಂದ್ರ ಚನ್ನಗಿರಿ ಮೊ.ಸಂ: 8660520572, ತಾಲ್ಲೂಕು ಮಾಹಿತಿಕೇಂದ್ರ ಹೊನ್ನಾಳಿ ಮೊ.ಸಂ: 9739888820, ತಾಲ್ಲೂಕು ಮಾಹಿತಿ ಕೇಂದ್ರ ಜಗಳೂರು ಮೊ.ಸಂ: 9880392344 ಸಂಪರ್ಕಿಸಬಹುದೆAದು ಇಲಾಖೆಯ ಅಧಿಕಾರಿ ಭಕ್ತ ಮಾರ್ಕಾಂಡಯ್ಯ ತಿಳಿಸಿದ್ದಾರೆ.



