ದಾವಣಗೆರೆ: ಶಾಮನೂರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ನಿನ್ನೆ ( ಫೆ.4) ತಡ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ನಷ್ಟ ಉಂಟಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ.
ಶಾಮನೂರು ರಸ್ತೆಯ ಕಾಸೆಲ್ ಅರ್ಕೆಡ್ನ ಅನಿಮೇಶನ್ ಅಂಡ್ ಸ್ಟೋಕ ಜೋನ್ನ ಬಹುಮಹಡಿ ಕಟ್ಟದಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ನೋಡ ನೋಡುತ್ತಲೇ ಇಡೀ ದಟ್ಟ ಹೊಗೆ ಇದೇ ಕಟ್ಟಡ ಆವರಿಸಿಕೊಂಡಿದೆ. ಬೆಂಕಿ ಅವಘಡದಲ್ಲಿ ಜೋನ್ನಲ್ಲಿದ್ದ ಕಂಪ್ಯೂಟರ್ ಸೇರಿದಂತೆ ಅನೇಕ ವಸ್ತುಗಳು ಸುಟ್ಟ ಹೋಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಸಿಬ್ಬಂದಿಗಳು ಜೋನ್ ಬಾಗಿಲು ಹಾಕಿಕೊಂಡು ಹೋಗಿದ್ದರಿಂದ, ಗಾಜುಗಳನ್ನು ಒಡೆದು ಒಳ ಪ್ರವೇಶ ಮಾಡಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ನಡೆಸುವಾಗ ಅಗ್ನಿ ಶಾಮಕ ವಾಹನದಲ್ಲಿ ನೀರು ಖಾಲಿಯಾಗಿ ಸಮಸ್ಯೆ ಎದುರಾಗಿತ್ತು. ನಂತರ ಮಹಾನಗರ ಪಾಲಿಕೆಯ ಟ್ಯಾಂಕರ್ನಿಂದ ನೀರು ತರಿಸಿಕೊಂಡು ಅಗ್ನಿನಂದಕ ವಾಹನಕ್ಕೆ ನೀರು ತುಂಬಿಸಿ ಕಾರ್ಯಾಚರಣೆ ನಡೆಸಲಾಯಿತು.



