ಡಿವಿಜಿ ಸುದ್ದಿ, ದಾವಣಗೆರೆ: ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಐತಿಹಾಸಿಕ ಕುರುವತ್ತಿ ಬಸವೇಶ್ವರ ಸ್ವಾಮಿ ಹಾಗೂ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಫೆ.23 ರಂದು ಭಾನುವಾರ ಸಂಜೆ 4.30 ಕ್ಕೆ ಜರುಗಲಿದೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ರಥೋತ್ಸವಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತಾಧಿಗಳಿಗೆ ಫೆ. 21 ರಂದು ನಗರದ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದಿಂದ ಚಾಲನೆ ದೊರೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕುರುವತ್ತಿ ಬಸವೇಶ್ವರ ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ಎನ್, ಸತ್ಯನಾರಾಯಣ, ಫೆ. 21 ರಂದು ರಾತ್ರಿ 8 ಗಂಟೆಗೆ ಸಮಿತಿಯ 16ನೇ ವರ್ಷದ ಪಾದಯಾತ್ರೆಗೆ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸುವರು. ಶಿವಯೋಗಿ ಬಕ್ಕೇಶ್ವರ ದೇವಸ್ಥಾನದಲ್ಲಿ ಮಹಾ ಮಂಗಳಾರತಿ ನಂತರ ದೊಡ್ಡ ಪೇಟೆಯಲ್ಲಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಂಗಳಾರತಿಯೊಂದಿಗೆ ಪಾದಯಾತ್ರೆಗೆ ಚಾಲನೆ ಸಿಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪ ಮೇಯರ್ ಬಿ.ಲೋಕೇಶ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ವಿನಯಾಸ್ವಾಮಿ, ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಅಜಯಕುಮಾರ್, ಆರ್ .ಎಲ್ ಶಿವಪ್ರಕಾಶ್, ಬಸವೇಶ್ವರ ಟ್ರಾನ್ಸ್ ಪೋರ್ಟ್ ವಿ. ಮಹಾಂತೇಶ್, ಎಂ.ಜಿ. ಬಸವರಾಜಪ್ಪ, ಭಾಗವಹಿಸಲಿದ್ದಾರೆ. ಎಲ್ಲಾ ಭಕ್ತಾಧಿಗಳು ಬಕ್ಕೇಶ್ವರ ದೇವಸ್ಥಾನದ ಬಳಿ ಸೇರಬೇಕು ಎಂದು ತಿಳಿಸಿದರು.
ಪಾದಯಾತ್ರೆಯು ಬಕ್ಕೇಶ್ವರ ದೇವಸ್ಥಾನದಿಂದ ಹೊಂಡದ ಸರ್ಕಲ್, ಯರಗುಂಟೆ, ಆವರಗೊಳ್ಳ, ಕೊಂಡಜ್ಜಿ, ಬುಳ್ಳಾಪುರ,ಕುರುಬರಹಳ್ಳಿ ಕ್ರಾಸ್, ದುಗ್ಗಾವತಿ ,ವಟ್ಲಳ್ಳಿ, ಕಡತಿ, ನಂದ್ಯಾಲ, ನಿಟ್ಟೂರು ಕ್ರಾಸ್, ಹಲುವಾಗಲ್ಲಿ ಮಧ್ಯಾಹ್ನದ ಊಟ, ಗರ್ಭಗುಡಿ, ಸಿದ್ದಾಪುರ, ಲಿಂಗನಾಯ್ಕನಹಳ್ಳಿ ಮಾರ್ಗದ ಮೂಲಕ ಶ್ರೀ ಕ್ಷೇತ್ರ ಕುರುವತ್ತಿ ತಲುಪಲಿದ್ದಾರೆ. ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗೆ 9972974802,9844444887, 96115118119, 94493743370 ಸಂಪರ್ಕಿಸಿ.



