Connect with us

Dvgsuddi Kannada | online news portal | Kannada news online

ದಾವಣಗೆರೆ: ಅಲ್ಪ ಇಳಿಕೆ ಕಂಡ ಅಡಿಕೆ ದರ; ಜ.24ರ ಕನಿಷ್ಠ, ಗರಿಷ್ಠ ಬೆಲೆ ಎಷ್ಟು..?

arecanut rate davangere

ಪ್ರಮುಖ ಸುದ್ದಿ

ದಾವಣಗೆರೆ: ಅಲ್ಪ ಇಳಿಕೆ ಕಂಡ ಅಡಿಕೆ ದರ; ಜ.24ರ ಕನಿಷ್ಠ, ಗರಿಷ್ಠ ಬೆಲೆ ಎಷ್ಟು..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಅಲ್ಪ ಇಳಿಕೆ ಕಂಡಿದೆ. ಕಳೆದ‌‌ ಒಂದು ವಾರದಿಂದ ಏರಿಕೆಯಾಗುತ್ತಿದ್ದ ಬೆಲೆಯಲ್ಲಿ ಇಂದು‌100 ರೂ.ಗಳಷ್ಟು ಇಳಿಕೆ ಕಂಡಿದೆ.

  • ಜ.24ರ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
  • ಗರಿಷ್ಠ ಬೆಲೆ 51,799
  • ಕನಿಷ್ಠ ಬೆಲೆ 26,200
  • ಸರಾಸರಿ ಬೆಲೆ 49,186
  • ಬೆಟ್ಟೆ ಅಡಿಕೆ ದರ
  • ಗರಿಷ್ಠ ಬೆಲೆ 31,836
  • ಕನಿಷ್ಠ ಬೆಲೆ 24,636
  • ಸರಾಸರಿ ಬೆಲೆ 29,002

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜ.24ರಂದು ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 51,799 ರೂ. ಇದ್ದು, ಕನಿಷ್ಠ ಬೆಲೆ 26,200 ರೂ., ಸರಾಸರಿ ಬೆಲೆ 49,186 ರೂ.‌ಇದೆ. ಇನ್ನೂ ಬೆಟ್ಟೆ ಅಡಿಕೆ ದರ ಗರಿಷ್ಠ 31,836 ರೂ ಇದೆ.

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಪ್ರತಿ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಸ್ವಲ್ಪ ಇಳುವರಿ ಕಡಿಮೆ. ಏಕೆಂದ್ರೆ 2023 ವರ್ಷದ ತೀವ್ರ ಮಳೆ ಕೊರತೆಯಿಂದ ಉಷ್ಣಾಂಶ ಏರಿಕೆಯಾಗಿ ಇಳುವರಿ ಕುಸಿತ ಕಂಡಿದೆ. ಈಗಾಗಲೇ ಅಡಿಕೆ ಕೊಯ್ಲು ಸಂಪೂರ್ಣ ಮುಗಿದಿದೆ. ಚಳಿಗಾಲ ಸಹ ಕೊನೆಯ ಹಂತಕ್ಕೆ ಬಂದಿದ್ದು, ಸಂಕ್ರಾಂತಿ ನಂತರ ಸೂರ್ಯ ತನ್ನ ಪಥ ಬದಲಿಸಲಿದ್ದೇನೆ. ದಿನದಿಂದ ದಿನಕ್ಕೆ ಬಿಸಿಲು ಏರಿಕೆಯಾಗುತ್ತಿದೆ. ಬೇಸಿಗೆ ಬಿಸಿಲಿನಿಂದ ಅಡಿಕೆ ತೋಟ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.

2024ರ ನವೆಂಬರ್‌ ಮೊದಲ ವಾರ ಕುಸಿದಿತ್ತು. ಈಗ ಡಿಸೆಂಬರ್ ನಲ್ಲಿ 51 ಸಾವಿರ ಗಡಿದಾಟಿ ಮತ್ತೆ ಕುಸಿತ ಕಂಡಿತ್ತು. ವರ್ಷದ ಕೊನೆಯಲ್ಲಿ‌ ದಿಢೀರ್ ಚೇತರಿಕೆ ಕಂಡಿತ್ತು. ಹೊಸ ವರ್ಷದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ‌. ಪ್ರಸ್ತುತ ಜನವರಿ ಮಧ್ಯದಲ್ಲಿ 52 ಸಾವಿರ ಸಮೀಪ ಬಂದಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ 2024ರ ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಭಾನುವಾರದ ರಾಶಿ ಭವಿಷ್ಯ 01 ಜೂನ್ 2025

    By

    ಈ ರಾಶಿಯವರಿಗೆ ವಿದೇಶ ಯೋಗ, ಈ ರಾಶಿಯವರಿಗೆ ಮದುವೆ ಯೋಗ, ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಭಾನುವಾರದ ರಾಶಿ ಭವಿಷ್ಯ 01...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 31 ಮೇ 2025

    By

    ಈ ರಾಶಿಯ ಕಲಾವಿದರಿಗೆ ಶುಭ ಸಂದೇಶ, ಈ ರಾಶಿಯವರಿಗೆ ಎಲ್ಲಾ ಇದ್ದು ಏನೂ ಕೈಗೂಡುತ್ತಿಲ್ಲ, ಶನಿವಾರದ ರಾಶಿ ಭವಿಷ್ಯ 31 ಮೇ...

  • astrology today astrology today

    ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 30 ಮೇ 2025

    By

    ಈ ರಾಶಿಯವರ ವ್ಯಾಪಾರಕ್ಕೆ ಗ್ರಾಹಕರ ಕೊರತೆ, ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ , ಶುಕ್ರವಾರದ ರಾಶಿ ಭವಿಷ್ಯ...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 29 ಮೇ 2025

    By

    ಈ ರಾಶಿಯವರಿಗೆ ಬಂಪರ್, ಈ ರಾಶಿಯವರಿಗೆ ಮದುವೆ ಯೋಗ, ಈ ರಾಶಿ ದಂಪತಿಗಳಿಗೆ ಸಂತಾನ ಭಾಗ್ಯ, ಗುರುವಾರದ ರಾಶಿ ಭವಿಷ್ಯ 29...

To Top