ದಾವಣಗೆರೆ: ಜಿಲ್ಲೆಯ ನ್ಯಾಮತಿ ಪಟ್ಟಣದ ಗಾಂಧಿ ರಸ್ತೆಯ ಆಟೋ ನಿಲ್ದಾಣ ಬಳಿಯ ಪಾಳು ಬಿದ್ದ ಬಾವಿಗೆ ಕಾಲು ಜಾರಿ ಬಿದ್ದ ವೃದ್ಧೆ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲೂಕಿನ ಕೂಗನಹಳ್ಳಿ ಗ್ರಾಮದ ಗಂಗಮ್ಮ (70) ಸಾವನ್ನಪ್ಪಿದ ದುರ್ದೈವಿ. ಮೃತ ಗಂಗಮ್ಮಳು ತಮ್ಮ ವೃದ್ಧಾಪ್ಯ ವೇತನವನ್ನು ತೆಗೆದುಕೊಳ್ಳಲು ನ್ಯಾಮತಿ ಬ್ಯಾಂಕಿಗೆ ಬಂದಿದ್ದರು. ಬ್ಯಾಂಕಿನಲ್ಲಿ ತಮ್ಮ ವೃದ್ಧಾಪ್ಯ ವೇತನವನ್ನು ತೆಗೆದುಕೊಂಡು ತಮ್ಮೂರಿಗೆ ಹಿಂತಿರುಗಿ ಹೋಗಲು ಪಟ್ಟಣದ ಆಟೋ ನಿಲ್ದಾಣದ ಬಳಿ ಬಂದಾಗ ಮೂತ್ರ ವಿಸರ್ಜನೆ ಮಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ. ತುಂಬಾ ಹೊತ್ತು ಕಳೆದರೂ ವೃದ್ಧೆ ಬಾರದ ಹಿನ್ನೆಲೆಯಲ್ಲಿ ಜೊತೆಯಲ್ಲಿದ್ದ ಮೃತ ಗಂಗಮ್ಮಳ ಮೊಮ್ಮಗಳು ಅಜ್ಜಿಯನ್ನು
ಹುಡಿಕೊಂಡು ಹೋದಾಗ ತನ್ನ ಅಜ್ಜಿ ಬಾವಿಗೆ
ಬಿದ್ದಿರುವುದು ತಿಳಿದಿದೆ.
ಕೂಡಲೇ ಸ್ಥಳೀಯರು ಪೊಲೀಸ್ ಮತ್ತು
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಹೊನ್ನಾಳಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಟಿ.ಪರುಶರಾಮ ನೇತೃತ್ವದಲ್ಲಿ ತಂಡವು ಕಾರ್ಯಚಾರಣೆ ಮೂಲಕ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಮೃತ ಗಂಗಮ್ಮಳ ಸಾವಿಗೆ ಕಾರಣವಾದ ಬಾವಿಯ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ತಮ್ಮ ತಾಯಿಯ ಸಾವಿಗೆ ನ್ಯಾಯ ನೀಡುವಂತೆ ಮೃತ ಗಂಗಮ್ಮಳ ಪುತ್ರಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,
ತನಿಖೆ ಪ್ರಗತಿಯಲ್ಲಿದೆ.