ದಾವಣಗೆರೆ: ರಾತ್ರಿ ಜಾತ್ರೆಗೆ ಹೋಗಿ ಬರ್ತಿನಿ ಎಂದು ಮನೆಯಲ್ಲಿ ಹೇಳಿ ಹೋಗಿದ್ದ ಯುವಕ , ಬೆಳಗ್ಗೆ ಆಗುವಷ್ಟರಲ್ಲಿ ಜಮೀನೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈ ಘಟನೆ ಮಾಯಕೊಂಡ ಹೊರ ವಲಯದ ಜಮೀನೊಂದಲ್ಲಿ ನಡೆದಿದೆ. ಮಾಯಕೊಂಡ ಗ್ರಾಮದ ರಾಜೇಶ ವಿ.ಎಂ. (23) ಮೃತ ಯುವಕ. ಹುಣಸೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ರಾಮಗೊಂಡನಹಳ್ಳಿಯಲ್ಲಿ ಜಾತ್ರೆ ಇದೆ.ಅಲ್ಲಿಗೆ ಹೋಗಿ ಬರುವುದಾಗಿ ರಾಜೇಶ್ ಮನೆಯಲ್ಲಿ ಹೇಳಿ ಹೋಗಿದ್ದನು. ಆದರೆ, ಬೆಳಿಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನನ್ನ ಮಗನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಸಮಸ್ಯೆ ಎಂದು ತಂದೆ ಮಾಲತೇಶ್ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.