Connect with us

Dvgsuddi Kannada | online news portal | Kannada news online

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ಹಕ್ಕು ವರ್ಗಾವಣೆಗೆ ಮಹತ್ವದ ಆದೇಶ..!!!

ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ಹಕ್ಕು ವರ್ಗಾವಣೆಗೆ ಮಹತ್ವದ ಆದೇಶ..!!!

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ಹಕ್ಕು ವರ್ಗಾವಣೆಗೆ ಇದೇ ಡಿಸೆಂಬರ್ 18 ರ ಸರ್ಕಾರದ ಆದೇಶದಂತೆ ನಿಗಧಿಪಡಿಸಲಾಗಿದ್ದ 45 ದಿನಗಳ ಅವಧಿಯನ್ನು 30 ದಿನಗಳಿಗೆ ಕಡಿತಗೊಳಿಸಿದೆ.  ಕಾವೇರಿ-2.0 ತಂತ್ರಾಂಶದೊಂದಿಗೆ ಇ- ಆಸ್ತಿ ತಂತ್ರಾಂಶವನ್ನು ಸಂಯೋಜನೆಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕ ತಿಳಿಸಿದ್ದಾರೆ.

  • ಸ್ಥಿರಾಸ್ತಿಗಳ ಹಕ್ಕು ವರ್ಗಾವಣೆಗೆ ಮಹತ್ವದ ಆದೇಶ
  • 45 ದಿನಗಳ ಅವಧಿಯನ್ನು 30 ದಿನಗಳಿಗೆ ಕಡಿತ
  • ಅವಧಿಯ ನಂತರ ಆಕ್ಷೇಪಣೆ ಇಲ್ಲದಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ, ಆಸ್ತಿ ಹಕ್ಕು ವರ್ಗಾವಣೆಗೆ ಕ್ರಮ

ಸಂಯೋಜನೆಗೋಳಿಸಿದ ದಿನಾಂಕದಿಂದ ನೋಂದಾವಣೆಯಾಗಿರುವ ದಸ್ತಾವೇಜುಗಳಿಗೆ ಹಾಗೂ ಹಕ್ಕು ವರ್ಗಾವಣೆಗಾಗಿ ಮಹಾನಗರಪಾಲಿಕೆ ವಲಯ ಕಛೇರಿಯಲ್ಲಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಕಾವೇರಿ-2.0 ತಂತ್ರಾಂಶದಿಂದ ಸ್ವೀಕೃತವಾಗುವ ವಹಿವಾಟನ ದಾಖಲೆಗಳ ಆಧಾರದ ಮೇಲೆ ಹಕ್ಕು ವರ್ಗಾವಣೆಯನ್ನು ಸಾರ್ವಜನಿಕ ತಿಳುವಳಿಕೆ ಅವಧಿಯ ನಂತರ ಆಕ್ಷೇಪಣೆ ಇಲ್ಲದಿದ್ದಲ್ಲಿ ಅಥವಾ  ನಿಯಮಾನುಸಾರ ಪರಿಶೀಲಿಸಿ, ಆಸ್ತಿ ಹಕ್ಕು ವರ್ಗಾವಣೆಗೆ ಕ್ರಮ ವಹಿಸಲಾಗುವುದು.

ಅರ್ಜಿ ಅವಧಿ ಮುಗಿದ ನಂತರ ಸ್ವತ್ತಿನ ಮಾಲೀಕರು www.eaasthi.karnataka.gov.in ವೆಬ್‌ಸೈಟ್‌ನಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಂಡು, ನಿಗಧಿತ ಶುಲ್ಕವನ್ನು ಮಹಾನಗರಪಾಲಿಕೆಗೆ ಪಾವತಿಸಿ, ಇ- ಆಸ್ತಿ ಹಕ್ಕು ಬದಲಾವಣೆ ಪತ್ರ ನಮೂನೆ-2 ಅನ್ನು ಪಡೆಯ ಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top